

ಹಿರಿಯೂರು:
ತಾಲ್ಲೂಕಿನ ಆರನಕಟ್ಟೆಯ ಶ್ರೀವಾಣಿವಿಲಾಸ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂಬುದಾಗಿ ಶ್ರೀವಾಣಿವಿಲಾಸ ಗ್ರಾಮಾಂತರ ಪ್ರೌಢಶಾಲೆಯ ಶಾಲಾ ಆಡಳಿತ ಮಂಡಳಿಯು ಮಾಧ್ಯಮಗಳಿಗೆ ತಿಳಿಸಿದೆ.
ಎನ್.ಆಕಾಶ್ 110ಮೀ. ಹರ್ಡಲ್ಸ್ ನಲ್ಲಿ ಪ್ರಥಮಸ್ಥಾನ, ಹೆಚ್.ಪ್ರಭು ಉದ್ಧಜಿಗಿತದಲ್ಲಿ ಪ್ರಥಮಸ್ಥಾನ, ಜೊತೆಗೆ 400*400 ರಿಲೇಯಲ್ಲಿ ಪ್ರಥಮಸ್ಥಾನ, ಎನ್.ಆಕಾಶ್ 400ಮೀ.ಹರ್ಡಲ್ಸ್ ನಲ್ಲಿ ದ್ವಿತೀಯಸ್ಥಾನ, ಪಿ.ದರ್ಶನ್ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಬಾಲ್ ಬ್ಯಾಡ್ಮಿಂಟನ್ ತಂಡ ದ್ವಿತೀಯಸ್ಥಾನ, ಆರ್.ದೇವಿಪ್ರಸಾದ್ 400ಮೀ.ಹರ್ಡಲ್ಸ್ ನಲ್ಲಿ ತೃತೀಯಸ್ಥಾನ, ಕೃತಿಕ 800ಮೀ.ಓಟದಲ್ಲಿ ತೃತೀಯ ಸ್ಥಾನ , ಸಂಗೀತಾ 400ಮೀ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜಯಶಾಲಿಗಳಾಗಿರುವ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ಜಿ.ರಾಮಲಿಂಗೇಗೌಡ್ರು, ಕಾರ್ಯದರ್ಶಿ ಎನ್.ಶಿವಕುಮಾರ್, ಆಡಳಿತ ಮಂಡಳಿಯ ಎಲ್ಲಾ ಗೌರವಾನ್ವಿತ ನಿರ್ದೇಶಕರು, ಮುಖ್ಯ ಶಿಕ್ಷಕರಾದ ಕೆ.ಮಂಜುನಾಥ, ಸಹಶಿಕ್ಷಕರು, ಸಿಬ್ಬಂದಿವರ್ಗದವರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಜಿ.ತಿಪ್ಪೇಸ್ವಾಮಿ ಸೇರಿದಂತೆ ಶಾಲಾ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.