
ಹಿರಿಯೂರು :
ಧರ್ಮಪುರ ರೈತ ಸಂಪರ್ಕ ಕೇಂದ್ರ ಹಿರಿಯೂರು ಧರ್ಮಪುರ ಮುಖ್ಯ ರಸ್ತೆಯಿಂದ ದೂರವಿದ್ದು ರೈತರಿಗೆ ಇದರಿಂದ ಬಹಳ ಅನಾನುಕೂಲವಾಗುತ್ತಿದ್ದು, ಧರ್ಮಪುರ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಕ್ಕೆ ಹೊಸದಾಗಿ ನಿವೇಶನವನ್ನು ಧರ್ಮಪುರ ಗ್ರಾಮದಲ್ಲಿಯೇ ನೀಡಬೇಕು ಎಂಬುದಾಗಿ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.
ತಾಲ್ಲೂಕಿನ ಧರ್ಮಪುರ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಕ್ಕೆ ಹೊಸದಾಗಿ ನಿವೇಶನವನ್ನು ಧರ್ಮಪುರ ಗ್ರಾಮದಲ್ಲಿಯೇ ನೀಡಬೇಕೆಂದು ರಾಜ್ಯ ರೈತಸಂಘದ ವತಿಯಿಂದ ತಾಲ್ಲೂಕು ತಹಶೀಲ್ದಾರರವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಲಘು ಪೋಷಕಾಂಶ, ಕೀಟನಾಶಕ, ಪಿವಿಸಿ ಸ್ಪ್ರಿಂಕ್ಲರ್ ಪೈಪ್ ಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಸರಬರಾಜು ಮಾಡುವ ವಾಹನಗಳು ಮುಖ್ಯರಸ್ತೆಯಿಂದ ರೈತ ಸಂಪರ್ಕ ಕೇಂದ್ರಕ್ಕೆ ತಲುಪುವಾಗ ತುಂಬಾ ಕಿರಿದಾದ ರಸ್ತೆ ಇದ್ದು ಪಕ್ಕದಲ್ಲೇ ಖಾಸಗಿ ಮನೆಗಳು ಇರುತ್ತವೆ ಹಾಗೂ ವಿದ್ಯುತ್ ಸಂಪರ್ಕದ ತಂತಿಗಳು ವಾಹನಕ್ಕೆ ತಗುಲಿ ವಿದ್ಯುತ್ ಅವಗಡಗಳು ಸಂಭವಿಸುವ ಆತಂಕವಿರುತ್ತದೆ ಎಂದರಲ್ಲದೆ,
ರೈತಸಂಪರ್ಕ ಕೇಂದ್ರದ ಸುತ್ತಮುತ್ತ ಹಾಲಿ ಇರುವ ಖಾಸಗಿ ನಿವೇಶನಗಳಲ್ಲಿ ಮನೆಯಲ್ಲಿ ಲೇಔಟ್ ಕಾಮಗಾರಿಗಳು ನಡೆಯುತ್ತಿದ್ದು, ರೈತರು ಹಾಗೂ ವಾಹನಗಳು ಹೋಗಿ ಬರಲು ತುಂಬಾ ಅನಾನುಕೂಲವಾಗುತ್ತಿದೆ ಆದ ಕಾರಣ ದಯಮಾಡಿ ತಾವುಗಳು ತುರ್ತಾಗಿ ಧರ್ಮಪುರ ರೈತ ಸಂಪರ್ಕ ಕೇಂದ್ರವನ್ನು ಮುಖ್ಯರಸ್ತೆಗೆ ಸಂಪರ್ಕ ಇರುವಂತೆ ಹೊಸದಾಗಿ ಧರ್ಮಪುರ ಗ್ರಾಮದ ಭೂ ಪರಿವರ್ತಿತ ಪ್ರದೇಶದಲ್ಲಿ ನೀಡಬೇಕು, ಈ ನಿಟ್ಟಿನಲ್ಲಿ ಹೋಬಳಿಯ ಎಲ್ಲಾ ರೈತರಿಗೆ ಅನುಕೂಲ ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯರೈತಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಎಂ.ಲಕ್ಷ್ಮಿಕಾಂತ್, ತಾಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಹೆಚ್.ದಸ್ತಗೀರ್ ಸಾಬ್, ಆಲೂರು ಸಿದ್ದರಾಮಣ್ಣ, ಕೃಷಿ ಉಪನಿರ್ದೇಶಕ ಉಮೇಶ್, ಸಹಾಯಕ ನಿರ್ದೇಶಕ ಅಶೋಕ್, ಹೆಚ್.ತಿಮ್ಮಯ್ಯ, ವೆಂಕಟೇಶ್, ಉಮಾಪತಿ, ಪುನೀತ್, ಇವರುಗಳು ಉಪಸ್ಥಿತರಿದ್ದರು.
