June 13, 2026
00003

ಹಿರಿಯೂರು :

ತಾಲ್ಲೂಕಿನ ಸವಿತಾ ಸಮಾಜದ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ, ನಿಮ್ಮ ಸೇವೆಯನ್ನು ಮಾಡುವ ಭಾಗ್ಯ ನನ್ನದಾಗಲಿ ಎಂಬುದಾಗಿ ಬೊಮ್ಮನಹಳ್ಳಿ ಬಾಬು ಬಾವುಕರಾಗಿ ಮಾತನಾಡಿದರು.

ನಗರದ ಬಸವೇಶ್ವರ ಬಡಾವಣೆಯಲ್ಲಿ ಗುರುವಾರ ತಾಲೂಕು ಸವಿತಾ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ಸವಿತಾ ಸಮಾಜದ ತಾಲೂಕು ಅಧ್ಯಕ್ಷರಾದ ಎಸ್.ಬಸವರಾಜ್ ಅವರ ಗೃಹದಲ್ಲಿ ನಡೆದ ಈ ಸಮಾರಂಭದಲ್ಲಿ ನನಗೆ ಲಭಿಸಿದ ಭಾವಪೂರ್ಣ ಸ್ವಾಗತ ಮತ್ತು ಗೌರವ ನನಗೆ ಅತ್ಯಂತ ಸಂತಸ ತಂದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದ್ದ ಈ ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರು ನಾಯಕರು ಉತ್ಸಾಹಿ ಯುವಶಕ್ತಿ ಹಾಗೂ ತಾಯಂದಿರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ನನಗೆ ಶಕ್ತಿ ತುಂಬಿದ್ದಾರೆ ಎಂದರಲ್ಲದೆ,

ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜದ ಪ್ರತಿಯೊಬ್ಬ ಬಂಧುಗಳು ಮುಕ್ತವಾಗಿ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ನನಗೆ ತಮ್ಮ ಸಂಪೂರ್ಣ ನೈತಿಕ ಬೆಂಬಲವನ್ನು ಘೋಷಿಸಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ, ನಿಮ್ಮ ಈ ಪ್ರೀತಿ ನಂಬಿಕೆ ಮತ್ತು ಅಭಯಕ್ಕೆ ಸವಿತಾ ಸಮಾಜದ ಸರ್ವತೋಮುಖ ಏಳಿಗೆಗೆ ಶ್ರಮಿಸಲು ನಾನು ಸದಾ ಬದ್ಧವಾಗಿದ್ದೇನೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸವಿತಾಸಮಾಜದ ಅಧ್ಯಕ್ಷ ಬಸವರಾಜು, ಸೇರಿದಂತೆ  ಸವಿತಾಸಮಾಜದ ಮುಖಂಡರುಗಳು, ಸವಿತಾಸಮಾಜದ ಬಂಧುಗಳು, ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *