
ಹಿರಿಯೂರು :
ಇತ್ತೀಚೆಗೆ ಅನಾರೋಗ್ಯ ಕಾರಣದಿಂದ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಿ.ಸುಧಾಕರ್ ರವರು ನಿಧನರಾಗಿದ್ದು, ನಮ್ಮ ತಾಲ್ಲೂಕು ಒಬ್ಬ ಒಳ್ಳೆಯ ಜನನಾಯಕನನ್ನು ಕಳೆದುಕೊಂಡು ಅನಾಥವಾಗಿದೆ ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಸಂತಾಪ ಸೂಚಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಿ.ಸುಧಾಕರ್ ರವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಿರಿಯೂರು ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ನುಡಿ ನಮನ ಕಾರ್ಯಕ್ರಮ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯೂರು ತಾಲೂಕು ರೈತ ಸಂಘದ ಅಧ್ಯಕ್ಷರಾದ ಬಿ.ಓ.ಶಿವಕುಮಾರ್ ಮಾತನಾಡಿ, ಆಡುಮುಟ್ಟದ ಸೊಪ್ಪಿಲ್ಲ, ಸಚಿವರಾದ ಡಿ.ಸುಧಾಕರ್ ರವರಿಂದ ಸಹಾಯ ಪಡೆಯದ ವ್ಯಕ್ತಿಯಿಲ್ಲ, ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಸ್ಥಳದಲ್ಲಿಯೇ ಪರಿಹಾರ ನೀಡುವ ಮೂಲಕ ಸಚಿವರಾದ ಡಿ.ಸುಧಾಕರ್ ರವರು ಜನಾನುರಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಎಂ.ಲಕ್ಷ್ಮಿಕಾಂತ್, ರೈತಮುಖಂಡರುಗಳಾದ ಎಂ.ಆರ್.ಪುಟ್ಟಸ್ವಾಮಿ, ಬಿ.ಡಿ.ಶ್ರೀನಿವಾಸ್, ದಸ್ತಗಿರಿ ಸಾಬ್, ಚೇತನ್ ಯಳನಡು, ಮೇಟಿಕುರ್ಕೆ ತಿಪ್ಪೇಸ್ವಾಮಿ, ಎಮ್.ಪಿ.ನಾಗರಾಜು, ಮಹಾಲಿಂಗಪ್ಪ, ಈರತಿಮ್ಮಯ್ಯ, ಲೋಕೇಶ್, ಮಲ್ಲಪ್ಪನಹಳ್ಳಿಮುನಿಸ್ವಾಮಿ, ಈಶ್ವರಗೆರೆ ನಾಗರಾಜ್, ತಿಪ್ಪೇರುದ್ರಪ್ಪ, ಸತೀಶ್, ಮುಕುಂದಪ್ಪ, ಚಿಕ್ಕ ತಿಮ್ಮಯ್ಯ, ಸತ್ಯನಾರಾಯಣ, ಅಜಯಕುಮಾರ್, ಓದೋ ಹನುಮಂತಪ್ಪ, ರವೀಂದ್ರನಾಥ್, ಸೇರಿದಂತೆ ಇನ್ನು ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
