

ಹಿರಿಯೂರು:
ಭದ್ರಾಮೇಲ್ದಂಡೆ ಕಾಮಗಾರಿ ತುಂಗಾದಿಂದ ಭದ್ರಾದವರೆಗೆ ಹಾಗೂ ಭದ್ರಾಜಲಾಶಯದಿಂದ ಚಿತ್ರದುರ್ಗ ಜಿಲ್ಲಾ ಗಡಿ ಭಾಗದವರೆಗೆ ಕಾಮಗಾರಿಯ ಪ್ರಗತಿ ವೀಕ್ಷಣೆಯನ್ನು ಇದೇ ಸೆಪ್ಟಂಬರ್ 29 ಸೋಮವಾರ ದಿಂದ ಪ್ರಾರಂಭಿಸಲಾಗುತ್ತಿದೆ ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ಕೆ. ಟಿ. ತಿಪ್ಪೇಸ್ವಾಮಿಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕಾಮಗಾರಿ ವೀಕ್ಷಣೆ ಮಾಡಲು ಬರುವಂತಹ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಹಾಗೂ ತಿಂಡಿ ಊಟ ಮನೆಯಿಂದಲೇ ರೆಡಿ ಮಾಡಿಸಿಕೊಂಡು ಬೆಳಿಗ್ಗೆ 6:00ಗೆ ಹೊಳಲ್ಕೆರೆಗೆ ಬಂದು ಸೇರಬೇಕಾಗಿರುತ್ತದೆ ಎಂದರಲ್ಲದೆ, ಮುಂದಿನ ನವಂಬರ್ 1 ರಿಂದ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಏಕಕಾಲಕ್ಕೆ ಹೋರಾಟ ಪ್ರಾರಂಭಿಸಬೇಕಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಆದ್ದರಿಂದ ಈ ಕಾಮಗಾರಿ ವೀಕ್ಷಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ರೈತಮುಖಂಡರು ಹಾಗೂ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ರೈತ ಬಾಂಧವರು ಕಡ್ಡಾಯವಾಗಿ ಭಾಗವಹಿಸುವ ಮೂಲಕ ಈ ಕಾಮಗಾರಿ ವೀಕ್ಷಣೆ ಹಾಗೂ ಹೋರಾಟ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.