
ಹಿರಿಯೂರು :
ನಗರದ ಪ್ರವಾಸಿಮಂದಿರದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯ ಸಮಿತಿ ವತಿಯಿಂದ ಸೋಮವಾರದಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆರಂಭಗೊಂಡ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಮಲ್ಲಪ್ಪ ಹಂಚಿನಮನಿ ರಾಜ್ಯ ಕಾರ್ಯದರ್ಶಿಯಾಗಿ ಮದ್ಯ ಕರ್ನಾಟಕ ವಿಭಾಗೀಯ ಅಧ್ಯಕ್ಷರಾಗಿ ಬಸವರಾಜ್ (ಕುರುಬರಹಳ್ಳಿ) ಚಿತ್ರದುರ್ಗ ಹಿರಿಯೂರು ತಾಲ್ಲೂಕು ನಗರ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಇವರುಗಳನ್ನು ರಾಜ್ಯ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯ ಕಾರ್ಯಕಾರಣ ಸಭೆಯಲ್ಲಿ 2026-2027 ನೇ ಸಾಲಿನಲ್ಲಿ ದ್ವಿತೀಯ ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರವನ್ನು ಜುಲೈ 26ರ ಭಾನುವಾರದಂದು ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ರಾಮಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಆರ್, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಮಾರುತಿ ಎನ್, ರಾಜ್ಯ ಸಲಹೆಗಾರರಾದ ವಸಂತ್ ಬಿ, ರಾಜ್ಯ ಕಾರ್ಯದರ್ಶಿಯಾದ ಮಲ್ಲಪ್ಪ ಹಂಚಿನಮನಿ, ಹಾವೇರಿ ಜಿಲ್ಲಾಧ್ಯಕ್ಷರಾದ ಹೊನ್ನಪ್ಪ ಮಾಳಗಿ, ಚಿತ್ರದುರ್ಗ ಜಿಲ್ಲಾ ಕಾರ್ಯಧ್ಯಕ್ಷರಾದ ರಂಗನಾಥ್ (ಬಗ್ಗನಾಡು)ತಾಲ್ಲೂಕು ಅಧ್ಯಕ್ಷರರುಗಳಾದ ಓಂಕಾರ್ ಮೂರ್ತಿ ಹಿರಿಯೂರು, ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಜಗದೀಶ್ ಪೂಜಾರ್,ಹೂವಿನಹಡಗಲಿ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್, ಅಲ್ಪ ಸಂಖ್ಯಾತರ ಘಟಕ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಸಾಧಿಕ್ (ಸೀಮೆಎಣ್ಣೆ), ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲೇಶ್, ಜಿಲ್ಲಾ ಉಪಾಧ್ಯಕ್ಷರಾದ ಕೆಂಚಪ್ಪ, ಹಿರಿಯೂರು ತಾಲ್ಲೂಕು ಗೌರವಾಧ್ಯಕ್ಷರಾದ ದೇವರಾಜ್, ತಾಲ್ಲೂಕು ಕಾರ್ಯಧ್ಯಕ್ಷರಾದ ರಂಗಸ್ವಾಮಿ (ಆಟೋ)ತಾಲ್ಲೂಕು ಯುವ ಘಟಕ ಅಧ್ಯಕ್ಷರಾದ ಹೆಚ್.ಎನ್.ಅಶೋಕ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿಯಾದ ರಾಘವೇಂದ್ರ ಟಿ ಸೀಗೆಹಟ್ಟಿ, ತಾಲ್ಲೂಕು ಉಪಾಧ್ಯಕ್ಷರಾದ ದಾಸಪ್ಪ, ತಾಲ್ಲೂಕು ಕಾರ್ಯದರ್ಶಿಯಾದ ಗೌಡೇಶ್ವರ ಗೊಲ್ಲಹಳ್ಳಿ, ಲಿಂಗರಾಜ್,ಹಾವೇರಿ ಜಿಲ್ಲಾ ಗೌರವಾಧ್ಯಕ್ಷರಾದ ಗುಡ್ಡಪ್ಪ ಬಣಕಾರ, ಜಿಲ್ಲಾ ಉಪಾಧ್ಯಕ್ಷರಾದ ಗುಡ್ಡಪ್ಪ ಮಾಳಗಿ, ಪ್ರಧಾನ ಕಾರ್ಯದರ್ಶಿ ವೈ.ಹೆಚ್.ಗುಡ್ಡಪ್ಪ, ಬಸಪ್ಪಮಾಳಗಿ, ಅಜ್ಜಪ್ಪಹರಿಜನ, ಮರಿಯಪ್ಪಹರಿಜನ, ಮುತ್ತಪ್ಪದೊಡ್ಡಮನಿ, ನಾಗಪ್ಪಸೋಮಣ್ಣನವರ್, ಫಕೀರಪ್ಪ ಕಾರ್ಯದರ್ಶಿ ಹೂವಿನ ಹಡಗಲಿ,ಬಸವರಾಜ್, ಪ್ರಕಾಶ್, ಹುಚ್ಚಗೇಪ್ಪ, ಹೆಚ್.ದುರ್ಗೇಶ್ ಕಾರ್ಯಧ್ಯಕ್ಷರು ಹರಪನಹಳ್ಳಿ, ರವಿಚಂದ್ರ, ಟಿ.ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿ ಹನುಮಂತಪ್ಪ, ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
