April 21, 2026
05

ಹಿರಿಯೂರು:

ತಾಲ್ಲೂಕಿನ ಉಪವಿಭಾಗದ ವ್ಯಾಪ್ತಿಯ ಹರಿಯಬ್ಬೆ ಮತ್ತು ಪಿ.ಡಿ.ಕೋಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ  ನಿರ್ವಹಿಸುವ ಪ್ರಯುಕ್ತ ಸದರಿ ವಿದ್ಯುತ್ ಕೇಂದ್ರದ ಎಲ್ಲಾ ಕೆ.ವಿ. ಮಾರ್ಗಗಳಿಗೆ  ಸೆಪ್ಟಂಬರ್ 25ರಂದು  ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂಬುದಾಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆದ ಪೀರ್ ಸಾಬ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹರಿಯಬ್ಬೆ, ಧರ್ಮಪುರ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ, ಕೃಷ್ಣಪುರ, ಸೂಗೂರು, ಬುರುಡುಕುಂಟೆ, ಚಿಲ್ಲಹಳ್ಳಿ, ಈಶ್ವರಗೆರೆ, ಹೂವಿಹೊಳೆ, ಅಬ್ಬಿನಹೊಳೆ, ಕಣಜನಹಳ್ಳಿ ಬೇತೂರು, ಬೇತೂರುಪಾಳ್ಯ, ವಿ.ಕೆ.ಗುಡ್ಡ, ಪಿ.ಡಿ.ಕೋಟೆ, ಖಂಡೇನಹಳ್ಳಿ, ಹೊಸಕೆರೆ, ಅರಳಿಕೆರೆ, ಬಿ.ಕೆ.ಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *