April 11, 2026
0003

ಹಿರಿಯೂರು:

ಸಂಗೀತವು ಮನಸ್ಸಿಗೆ ಸಂತೋಷ ನೀಡುವ ಜೊತೆಗೆ, ಜೀವನದಲ್ಲಿನ ದುಃಖ-ಸಂಕಟ, ವೇದನೆ ದೂರ ಮಾಡಿ ಮನಸ್ಸನ್ನು  ಹಗುರಗೊಳಿಸಿ, ಹೊಸಬದುಕನ್ನು ರೂಪಿಸಿಕೊಳ್ಳಲು ಪ್ರೇರಣೆಯನ್ನು ನೀಡುತ್ತದೆ ಎಂಬುದಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿಯಾದ ಡಾ.ಜಿ.ಕೆ.ಪ್ರಮೋದ್ ಹೇಳಿದರು.         

ನಗರದ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳವಿಭಾಗಿ ಶ್ರೀರಂಗನಾಥಸ್ವಾಮಿ ಸಾಂಸ್ಕೃತಿಕ  ಕಲಾಸಂಘ(ರಿ) ಸಕ್ಕರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಸಂತ ಸಂಗೀತ ಗಾನ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

     

   

ಸಾಹಿತ್ಯ ಸಂಗೀತ ರಂಗಕಲೆ ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಾಡಿನ ಕಲೆ ಅನಾವರಣಕ್ಕೆ ಕಾರಣವಾಗಿದೆ. ಇವು ಮನುಕುಲಕ್ಕೆ ಬೇಕಾದ ಸೌಹಾರ್ದತೆ ,ಸಹಬಾಳ್ವೆ, ಪ್ರೀತಿ, ಪ್ರೇಮ, ಮಮತೆ, ಹಾಗೂ ಭಾವೈಕ್ಯತೆಯನ್ನು ತಂದುಕೊಡುತ್ತವೆ, ಈ ನಿಟ್ಟಿನಲ್ಲಿ ಇಂತಹ ಹೆಚ್ಚುಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಜೆ.ದಿನೇಶ್ .ಮಾತನಾಡಿ ಸಂಗೀತ ಒಂದು ತಪಸ್ಸು ಸಂಗೀತವನ್ನು ಕೇಳುವುದರಿಂದ ಮತ್ತು ಹಾಡುವದರಿಂದ ಮಾನಸಿಕ ನೆಮ್ಮದಿ ಏಕಾಗ್ರತೆ ದೊರೆಯುತ್ತದೆ, ನಮ್ಮ ರೋಗರುಜಿನಿ ದೂರಮಾಡಿ, ಮಳೆ ತರಿಸುವ ಶಕ್ತಿ ಸಂಗೀತಕ್ಕಿದೆ, ಆದುದರಿಂದ ಸಂಗೀತವನ್ನು ದಿವ್ಯ ಔಷಧಿ ಆಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಸಂಗೀತ ನಾಡಿನ ಸಾಂಸ್ಕೃತಿಕ ಕಲೆಯಾಗಿದ್ದು, ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ಮತ್ತು ನೀವೆಲ್ಲರೂ ಮಾಡಬೇಕಿದೆ ಎಂದರಲ್ಲದೆ,

ಶಾಲೆ ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಯಷ್ಟು ಪಠ್ಯೇತರ ಚಟುವಟಿಕೆಗಳು ನಡೆದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಕ್ರಿಯಾಶೀಲತೆ ಹೆಚ್ಚುತ್ತದೆ,ಆದಕಾರಣ ರಾಜ್ಯ ಸರ್ಕಾರವು ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಹಾಗೂ ವಸತಿ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ ಹಾಗೂ ನಾಟಕ ಶಿಕ್ಷಕರನ್ನು ಕೂಡಲೇ ಭರ್ತಿ ಮಾಡಬೇಕು, ಇದರಿಂದ ವಿದ್ಯಾರ್ಥಿಗಳನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿಸಕ್ಕರ ಮಾತನಾಡಿ, ಸಂಗೀತಕ್ಕೆ ಮೊದಲು ಯಾವುದೇ ರಾಗ, ತಾಳ, ಇರಲಿಲ್ಲ ಕ್ರಿ.ಶ.8ನೇ ಶತಮಾನದಲ್ಲಿ ಬದುಕಿದ್ದ ಮಹರ್ಷಿ ಮಾತಂಗಮುನಿಯವರು ಹಕ್ಕಿಗಳ ಚಿಲಿಪಿಲಿ ಗಾನ ಹರಿಯುವ ನದಿಯ ಜುಳುಜುಳುನಾದ  ಸುಯಿ ಸುಯಿ ಎಂದು ಬೀಸುವ ತಣ್ಣನೆಯ ಗಾಳಿಯ ಸುನಾದ ಆಧರಿಸಿ ಮೊದಲಿಗೆ ಸಂಗೀತಕ್ಕೆ ಹೊಸ ರಾಗ ತಾಳ ನೀಡಿದರು,

ಇವರು ಹಾಕಿಕೊಟ್ಟ ರಾಗ ಮತ್ತು ತಾಳಗಳ ಆಧಾರದ ಮೇಲೆ ಇಂದು ಹಿಂದುಸ್ತಾನಿ ಸಂಗೀತ ಕರ್ನಾಟಕ ಸಂಗೀತ ಹಾಗೂ ಪಶ್ಚಿಮಾತ್ಯ ಸಂಗೀತ ರೂಪುಗೊಂಡಿದೆ, ಆದುದರಿಂದ ಮಹರ್ಷಿ ಮಾತಂಗಮುನಿಯವರನ್ನು ಸಂಗೀತದ ಪಿತಾಮಹ ಎಂದು  ಕರೆಯಲಾಗುತ್ತಿದ್ದು, ಸಂಗೀತಕ್ಕೆ ಮಹರ್ಷಿಮಾತಂಗಮುನಿಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಇದೇ ವೇಳೆ ವಸಂತ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮದಲ್ಲಿ ಹೊಸದುರ್ಗದ ಓ.ಮೂರ್ತಿ. ಮತ್ತು ತಂಡದಿಂದ ಸುಗಮ ಸಂಗೀತ. ಬೋಸೆ ದೇವರಹಟ್ಟಿಯ ಎನ್.ಮಂಜಣ್ಣ ಮತ್ತು ತಂಡದಿಂದ ಕನ್ನಡ ಗೀತ ಗಾಯನ, ಫೀಲಾಪುರದ ಆರ್.ಕಂಠೇಶ್. ಮತ್ತು ತಂಡದಿಂದ ರಂಗಗೀತೆ ಗಾಯನ, ಶ್ರೀಮತಿ ಟಿ.ಸುಲೋಚನಾ ಮತ್ತು ತಂಡದಿಂದ ಕರ್ನಾಟಕ ಸಂಗೀತ, ಶ್ರೀಮತಿ ಹೆಚ್.ವೇದಪುಷ್ಪ, ಮತ್ತು ತಂಡದಿಂದ ಜಾನಪದ ಸಂಗೀತ, ಶ್ರೀಮತಿ ಎಚ್.ಆರ್.ಗೀತಾರಾಧಾಕೃಷ್ಣ ಮತ್ತು ತಂಡದಿಂದ ತತ್ವಪದ ಗಾಯನವನ್ನು ಕಲಾವಿದರು ಪ್ರಸ್ತುತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯರಂಗಭೂಮಿ ಕಲಾವಿದೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎಚ್.ಟಿ.ವಿಮಾಲಾಕ್ಷಿ .ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ  ಹರ್ತಿಕೋಟೆಮಹಾಸ್ವಾಮಿ. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಬಿ.ಆರ್.ಹೇಮಲತಾ. ಐಕ್ಯುಎಸಿ. ಸಂಚಾಲಕರಾದ ಮಹಮ್ಮದ್ ಸಾದತ್. ಸಹಾಯಕ ಪ್ರಾಧ್ಯಾಪಕರಾದ ಬಸವರಾಜ್ ಟಿ.ಬೆಳಗಟ್ಟ. ಡಾ.ಗಂಗಾಧರ್. ಡಾ.ದೇವಿಕ. ಬಿ.ಎಸ್.ರಾಮಪ್ಪ. ವಲಿ, ಹಾರ್ಮೋನಿಯಂ ವಾದಕರಾದ ಎನ್.ಶಿವಲಿಂಗಪ್ಪ. ತಬಲವಾದಕರಾದ ಸುಬ್ರಹ್ಮಣ್ಯ. ಎಸ್.ಅಭಿಷೇಕ್. ನವೀನ್. ಈ.ಮಹಾಲಿಂಗಪ್ಪ. ಸಂಜೀವ್, ಡಾ.ಶರಣಪ್ಪ. ಜಯಶ್ರೀ. ತಿಪ್ಪೇಶ್. ಪಾಟೀಲ್. ಸಂಜಯ್.ರಮೇಶ್ ತಳವಾರ್. ಆರ್.ಕುಮಾರ್, ಅನಿತಾಕುಮಾರಿ, ಲಕ್ಷ್ಮಿಬಾಯಿ. ನೂತನ್, ಐ.ಜಿ.ರೇವಣ್ಣ, ಶಿವು, ಕಾಲೇಜಿನ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *