April 11, 2026
000003

ಹಿರಿಯೂರು:                                                       

ಮಹಾವೀರರ ತತ್ವ ಸಂದೇಶ ಆದರ್ಶಗಳು ವಿಶ‍್ವವಿಖ್ಯಾತಿ ಪಡೆದಿದ್ದು, ಜಗತ್ತಿನಲ್ಲಿ ಅಹಿಂಸೆಯನ್ನು ಪ್ರತಿಪಾದಿಸಿ, ಹಿಂಸೆಯನ್ನು ಖಂಡಿಸಿದವರು ಭಗವಾನ್ ಮಹಾವೀರರಾಗಿದ್ದಾರೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಗವಾನ್ ಮಹಾವೀರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ಅಹಿಂಸೆಯಿಂದ ಮಾತ್ರ ಜಗತ್ತು, ಶಾಂತಿ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ,. ಮಾನವ ಕಲ್ಯಾಣಕ್ಕಾಗಿ ಅಹಿಂಸಾ ಮಾರ್ಗ ದಾರಿದೀಪವೆಂದು ಪ್ರತಿಪಾದಿಸಿದ್ದಇವರು ಮಹಾವೀರರ ತತ್ವ ಹಾಗೂ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಖಜಾನೆ ಅಧಿಕಾರಿ ಸಂಜಯ್,  ಶಿಕ್ಷಣ ಇಲಾಖೆಯ ರವೀಂದ್ರ ನಾಯಕ್, ಅಂಬುಜಮ್ಮ, ವನಮಾಲಾ, ಬಸವರಾಜ್, ಪ್ರಜ್ವಲ್, ಮಂಜುನಾಥ್, ಸೌಮ್ಯ, ಪದ್ಮಾ, ಸುರೇಶ್, ಶ್ರೀನಿವಾಸ ರೆಡ್ಡಿ ಹಾಗೂ ನಗರದ ಜೈನ ಸಮುದಾಯದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *