April 11, 2026
00002

ಹಿರಿಯೂರು :

ಹಂದಿ ಮಾಲೀಕರುಗಳಿಗೆ ಸುಮಾರು 6 ರಿಂದ 7 ಬಾರಿ ಸಭೆ ಕರೆದು ನಗರಗಳಲ್ಲಿ ಹಂದಿಗಳು ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕರಿಗೆ ಮಕ್ಕಳಿಗೆ ತೊಂದರೆ ಯಾಗುತ್ತಿರುವ ಬಗ್ಗೆ ತಿಳಿಸಿದ್ದರೂ ಕೂಡ ಟಿ.ಬಿ.ಸರ್ಕಲ್ ಹತ್ತಿರ ಬೈಕ್ ಸವಾರನಿಗೆ ಅಪಘಾತ ಸಂಭವಿಸಿದ್ದರೂ ಎಚ್ಚೆತ್ತುಕೊಳ್ಳದಿರುವುದರಿಂದ ಕ್ರಮಕೈಗೊಳ್ಳಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಮ್ ಹೇಳಿದರು.

ನಗರದಲ್ಲಿ ನಗರಸಭೆ ವತಿಯಿಂದ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಿ ಸುಮಾರು 30 ರಿಂದ 35 ಹಂದಿಗಳನ್ನು ಊರಿಂದ ಹೊರಗೆ ಸಾಗಿಸಿ, ನಂತರ ಅವರು ಮಾತನಾಡಿದರು.

ಇನ್ನು ಮುಂದೆಯದರೂ ಹಂದಿ ಮಾಲೀಕರುಗಳು ಎಚ್ಚೆತ್ತುಕೊಂಡು ಹಂದಿಗಳನ್ನು ನಗರದಲ್ಲಿ ಓಡಾಡಲು ಬಿಡದೇ ಸರಿಯಾಗಿ ನಿರ್ವಹಣೆ ಮಾಡದೇ ಹೋದಲ್ಲಿ ಹಂದಿ ಮಾಲೀಕರುಗಳ ವಿರುದ್ಧ ಕಾನೂನುಕ್ರಮವನ್ನು ಜರುಗಿಸಲಾಗುವುದು ಎಂಬುದಾಗಿ ಹಂದಿ ಮಾಲೀಕರುಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *