

ಹಿರಿಯೂರು:
ಚಳಿ, ಮಳೆ ಲೆಕ್ಕಿಸದೆ ಬೆಳಗಿನ ಜಾವಕ್ಕೇ ಎದ್ದು, ಕಸಗುಡಿಸಿ, ನಗರವನ್ನು ಸ್ವಚ್ಚಗೊಳಿಸುವ ಪೌರಕಾರ್ಮಿಕರ ಸೇವೆ ಭಗವಂತ ಮೆಚ್ಚುವಂತೆ ಸ್ಮರಣೀಯವಾದದ್ದು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ತ್ಯಾಜ್ಯವಿಲೇವಾರಿ ಕೆಲಸದಲ್ಲಿ ಬದುಕು ಕಳೆಯುವ ನಿಮಗೆ ಒಂದಿಷ್ಟು ಮನರಂಜನೆ ಸಿಗಲಿ ಎಂಬ ಕಾರಣಕ್ಕೆ ಕ್ರೀಡಾಕೂಟ ಆಯೋಜಿಸಲಾಗಿದೆ. ನಿಮ್ಮೆಲ್ಲಾ ನ್ಯಾಯಯುತ ಬೇಡಿಕೆಗಳ ಪರವಾಗಿ ನಾವಿದ್ದೇವೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಪೌರಾಯುಕ್ತರಾದಎ.ವಾಸೀಂ , ಸದಸ್ಯರಾದ ಎಂ.ಡಿ.ಸಣ್ಣಪ್ಪ, ಈರಲಿಂಗೇಗೌಡ, ಬಿ.ಎನ್.ಪ್ರಕಾಶ್, ನರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಶಿವರಂಜನಿಯಾದವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.