
ಹಿರಿಯೂರು:
ಜಿಲ್ಲೆಯಲ್ಲಿ ಜನಪರ ರೈತ ಹೋರಾಟಗಾರರಾಗಿ, ಪತ್ರಕರ್ತರಾಗಿ ಗುರುತಿಸಿಕೊಂಡು, ಕೊಡುಗೈ ದಾನಿಯಾಗಿ ಜನಪ್ರಿಯತೆಗಳಿಸುವ ಮೂಲಕ ಜನಮನಗೆದ್ದಿರುವ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪನವರು ತಮ್ಮ ಹುಟ್ಟುಹಬ್ಬದ ಸವಿನೆನಪಿಗಾಗಿ ರೆಡ್ ಕ್ರಾಸ್ ಸಂಸ್ಥೆಗೆ ಉಚಿತ ಅಂಬ್ಯುಲೆನ್ಸ್ ಕೊಡುಗೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಗಳಾದ ಹೆಚ್.ಎಸ್.ಸುಂದರ್ ರಾಜ್ ಅವರು ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶ್ರೀಯುತ ಆಲೂರುಹನುಮಂತರಾಯಪ್ಪನವರ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಶುಭಹಾರೈಸಿ ಅವರು ಮಾತನಾಡಿದರು.

ಈಗಾಗಲೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವಿವಿಧ ದೇವಸ್ಥಾನಗಳಿಗೆ, ಶಾಲಾ-ಕಾಲೇಜುಗಳಿಗೆ ಹಾಗೂ ವೃದ್ಧಾಶ್ರಮಗಳಿಗೆ ದೇಣಿಗೆಯನ್ನು ನೀಡುವ ಮೂಲಕ ಸಮಾಜದ ಶ್ರೇಯೋಭಿವೃದ‍್ಧಿಗಾಗಿ ಶ್ರಮಿಸುತ್ತಿದ್ದು, ಇವರಿಗೆ ಆ ಭಗವಂತನು ಉತ್ತಮ, ಆರೋಗ್ಯ, ಆಯಸ್ಸು, ಯಶಸ್ಸುನ್ನು ದಯಪಾಲಿಸಲಿ ಎಂದರಲ್ಲದೆ,
ಆಲೂರುಹನುಮಂತರಾಯಪ್ಪನವರ ಈ ಉಚಿತ ಅಂಬ್ಯುಲೆನ್ಸ್ ಸೇವೆ ಜಿಲ್ಲೆಯಲ್ಲಿಯೇ ಒಂದು ಮಾದರಿ ಸೇವೆಯಾಗಲಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಸಂಚರಿಸುವ ಮೊದಲ “ಉಚಿತಅಂಬ್ಯುಲೆನ್ಸ್ ಸೇವೆ” ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದಕ್ಕೆ ಕಾರಣಕರ್ತರಾದ ಆಲೂರುಹನುಮಂತರಾಯಪ್ಪನವರಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ತುಂಬು ಹೃದಯಪೂರ್ವಕ ಧನ್ಯವಾದಗಳು ಎಂಬುದಾಗಿ ಅವರು ಹೇಳಿದರು.

ಈ ಅಂಬ್ಯುಲೆನ್ಸ್ ನಿರ್ವಹಣೆಯ ವೆಚ್ಚ ಹಾಗೂ ಜವಬ್ದಾರಿಯನ್ನು ರೆಡ್ ಕ್ರಾಸ್ ಸಂಸ್ಥೆ ನಿರ್ವಹಿಸಲಿದ್ದು, ಇದನ್ನು ಬಳಸುವವರಿಗೆ ಅಂಬ್ಯುಲೆನ್ಸ್ ಬಾಡಿಗೆ ಉಚಿತವಾಗಿದ್ದು, ಆದರೆ, ಪ್ರಯಾಣಕ್ಕೆ ಬೇಕಾದ ಡೀಸೆಲ್ ವ್ಯವಸ್ಥೆಯನ್ನು ಬಳಕೆದಾರರು ಕೊಡಬೇಕಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರುಗಳಾದ ಟಿ.ಮಲ್ಲೇಶಪ್ಪ, ಎಲ್.ಆನಂದಶೆಟ್ಟಿ, ದೇವರಾಜ್ ಮೂರ್ತಿ, ಥಿಯೋಸಾಫಿಕಲ್ ರಂಗನಾಥಪ್ಪ, ಉಮೇಶ್ ಯಾದವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
