
ಹಿರಿಯೂರು:
ಅಜ್ಞಾನ ಮತ್ತು ವಿಜ್ಞಾನಕ್ಕೂ ಬಹಿರಂಗ ಅಂತರವಿದೆ. ಈ ಅಂತರವೇನೆಂದರೆ ಅಜ್ಞಾನ ತಪ್ಪುಗಳ ಮಹಾಕೂಟ. ವಿಜ್ಞಾನ ಎಂದರೆ ಸತ್ಯ. ಸರಿ-ತಪ್ಪುಗಳ ನಿಖರತೆಗೆ ಹಾಗೂ ಸರಿಯಾದ ಪರೀಕ್ಷೆ ಪರಿಶೋಧನೆಯ ಸತ್ಯಶೋಧ.. ಎಂಬುದಾಗಿ ಪರಮಪೂಜ್ಯ ಶ್ರೀ ಬಸವಹರಳಯ್ಯಸ್ವಾಮೀಜಿಯವರ ಹೇಳಿದರು.
ತಾಲ್ಲೂಕಿನ ಶಿವಶರಣ ಹರಳಯ್ಯ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸತ್ಯಶೋಧದ ಪರಮ ಸತ್ಯವೇ ವಿಜ್ಞಾನ.ಅಂದರೆ ಪರೀಕ್ಷೆಗೆ ಒಳಪಡುವುದೆಲ್ಲವೂ ವಿಜ್ಞಾನ, ಪರೀಕ್ಷೆಗೆ ಒಳಪಡದಿರುವುದೇ ಅಜ್ಞಾನ. ಅಗತ್ಯವೇ ವಿಜ್ಞಾನ. ಅಗತ್ಯವೇ ಅಜ್ಞಾನ. ಸತ್ಯಶೋಧಕರೆಲ್ಲಾ ವಿಜ್ಞಾನಿಗಳಾದರು ಅಸತ್ಯಶೋಧಕರೆಲ್ಲಾ ಅಜ್ಞಾನಿಗಳಾದರು. ಈ ಸತ್ಯಶೋಧನೆ ದಾರಿಯಲ್ಲಿ ಬಂದವರೆಲ್ಲ ವಿಜ್ಞಾನಿಯಾಗಿರುವರು ಎಂಬುದಾಗಿ ಅವರು ಹೇಳಿದರು.
ರಾಷ್ಟ್ರೀಯ ವಿಜ್ಞಾನದಿನದ ಪ್ರಯುಕ್ತ ಇಂದು ನಾವೆಲ್ಲ ಸಂಶೋಧನೆಗಾಗಿ ಕಳೆದು ಹೊಸಹೊಸ ಅವಿಷ್ಕಾರ ಮಾಡಿ ಸಮಾಜದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರ ಸವಿ ನೆನಪಿಗಾಗಿ ಸರ್ಕಾರ ರಾಷ್ಟ್ರೀಯ ದಿನ ಆಚರಿಸುವ ಮೂಲಕ ಈ ಮಹನೀಯರಿಗೆ ಗೌರವ ಸಲ್ಲಿಸುವ ಈ ಸಂದರ್ಭದಲ್ಲಿ ಸರ್.ಸಿ.ವಿ.ರಾಮನ್ ಅವರನ್ನು ನೆನಪಿಸುತ್ತಾ ಈ ಕಾರ್ಯಕ್ರಮ ಯುವಕರ ಬಾಳಿಗೆ ಹೊಸಬೆಳಕನ್ನು ನೀಡಿ ಹೊಸ ಹೊಸ ವಿಜ್ಞಾನಿಗಳನ್ನು ರೂಪಿಸಲಿ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ರಾಜಣ್ಣ ಮತ್ತು ರಕ್ಷತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
