May 30, 2026
7

ಹಿರಿಯೂರು:

ತಾಲ್ಲೂಕಿನ ಮದ್ದಿಹಳ್ಳಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವರ್ಷವಾಗುತ್ತಾ ಬಂದರೂ ಇದುವರೆಗೂ ರಿಪೇರಿ ಮಾಡಿಸಿಲ್ಲ ಎಂಬುದಾಗಿ ಗ್ರಾಮಸ್ಥರು ದೂರಿದ್ದಾರೆ.

ಬಾಗಿಲು ಹಾಕಿದ ಶುದ್ಧ ಕುಡಿಯುವ ನೀರಿನ  ಘಟಕದ ವೀಡಿಯೋ ಪತ್ರಿಕೆಗಳಿಗೆ ಕಳಿಸಿರುವ ಗ್ರಾಮಸ್ಥರು ಗ್ರಾಮದಲ್ಲಿ  ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹತ್ತಿರತ್ತಿರ  ವರ್ಷವಾಗುತ್ತಿದೆ. ಜನರು  ಪ್ಲೋರೈಡ್ ಯುಕ್ತ ನೀರನ್ನೇ ಕುಡಿದು ಕಾಯಿಲೆ ಬೀಳುತ್ತಿದ್ದಾರೆ. ಶುದ್ಧ ಕುಡಿಯುವ ನೀರಿಗಾಗಿ  ಗ್ರಾಮದ ಜನರು ಪಕ್ಕದ  ಖಂಡೇನಹಳ್ಳಿಗೆ ಹೋಗಬೇಕು.

ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಿ ಎಂದು ಪಿ.ಡಿ.ಕೋಟೆ  ಗ್ರಾಮಪಂಚಾಯಿತಿಗೆ ಮನವಿ ಮಾಡಲು ಹೋದರೆ  ಅಧಿಕಾರಿಗಳೇ ಸಿಗುವುದಿಲ್ಲ. ಅವರ ಬೇಜವಬ್ದಾರಿತನದಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಸಿಗದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು  ಈ ಘಟಕವನ್ನು  ರಿಪೇರಿ ಮಾಡಿಸಿ ಗ್ರಾಮದ ಜನರ ಆರೋಗ್ಯ ಕಾಪಾಡಬೇಕಕು ಎಂಬುದಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *