
ಹಿರಿಯೂರು:
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀರೇಣುಕಾಪರಮೇಶ್ವರಿದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 24 ರಿಂದ ಮಾರ್ಚ್7ರವರೆಗೆ ನಡೆಸಲು ದೇವಸ್ಥಾನದ ಆಡಳಿತ ಮಂಡಳಿಯಿಂದ ತೀರ್ಮಾನಿಸಲಾಗಿದೆ ಎಂಬುದಾಗಿ ಮಾಹಿತಿ ತಿಳಿದು ಬಂದಿದೆ.
ಫೆಬ್ರವರಿ 24 ರಂದು ಕಂಕಣೋತ್ಸವ, ಮಾರ್ಚ್ 2ರ ಸೋಮವಾರ ಬೆಳಗ್ಗೆ ದೊಡ್ಡುತ್ಸವ, ಜಲಧಿ ಪೂಜೆ ಹಾಗೂ ಆರತಿಗಳು ನಡೆಸಲಾಗುತ್ತದೆ. ಮಾರ್ಚ್ 3ರ ಮಂಗಳವಾರದಂದು ರಾತ್ರಿ ಕಲ್ಲುಗಾಲಿ ರಥೋತ್ಸವ, ಮಾರ್ಚ್ 4ರ ಬುಧವಾರ ರಾತ್ರಿ ಮೊದಲಸಿಡಿ, ಬೆಳ್ಳಿ ಆನೆ ಅಂಬಾರಿ ಉತ್ಸವ ಹಮ್ಮಿಕೊಂಡಿದ್ದು,
ಮಾರ್ಚ್ 5ರ ಗುರುವಾರದಂದು ಸಾಯಂಕಾಲ ಅಗ್ನಿಗೊಂಡ, ಬಣ್ಣದ ಆನೆ ಅಂಬಾರಿ ಉತ್ಸವ, ಮಾರ್ಚ್ 6ರ ಶುಕ್ರವಾರದಂದು ಆರತಿ ಕಾರ್ಯಕ್ರಮ, ಮಾರ್ಚ್ 7ರ ಶನಿವಾರ ಬೆಳಗ್ಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಓಕಳಿ, ಮೈಲಾರಸೇವೆ, ಉಯ್ಯಾಲೋತ್ಸವ, ಶಸ್ತ್ರದಾರತಿ ನಡೆಸಲಾಗುತ್ತದೆ.
ಅದೇ ದಿನ ಸಾಯಂಕಾಲ ಕಂಕಣವಿಸರ್ಜನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಸಲಾಗುವುದು ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.
ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀರೇಣುಕಾಪರಮೇಶ್ವರಿದೇವಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 6366143382, 9901280890 ದೂರವಾಣಿ ಸಂಖ್ಯೆಗೆಗಳಿಗೆ ಸಂಪರ್ಕಿಸಬಹುದಾಗಿದೆ.

