
ಹಿರಿಯೂರು:
ನಗರದ 30ನೇ ವಾರ್ಡ್ ನಲ್ಲಿ ಆಶ್ರಯ ಮನೆಗಳನ್ನು ಕಟ್ಟಿರುವ ಸಾರ್ವಜನಿಕರು ಓಡಾಡುವ ರಸ್ತೆಯನ್ನು ಹೊತ್ತುವರಿ ಮಾಡಿಕೊಂಡು ಕಾಂಪೌಡ್ ನಿರ್ಮಾಣ ಮಾಡುತ್ತಿದ್ದಾರೆ ಎಂಬುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕರಾದ ಹೆಗ್ಗೆರೆ ಮಂಜುನಾಥ್ ಅವರು ಆರೋಪಿಸಿದರು.
ನಗರದ ಆಶ್ರಯ ಯೋಜನೆ ಮನೆಗಳಿಗೆ ಓಡಾಡುವ ರಸ್ತೆ ಜಾಗದಲ್ಲಿ ಕಾಂಪೌಂಡ್ ಕಟ್ಟುತ್ತಿದ್ದು ಸಾರ್ವಜನಿಕರಿಗೆ ಓಡಾಡಲು ರಸ್ತೆ ಬಿಡಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಜಾಗಕ್ಕಿಂತ ಹೆಚ್ಚು ಜಾಗದಲ್ಲಿ ಅಳತೆಗಿಂತ ಜಾಸ್ತಿ ಕಾಂಪೌಂಡ್ ಕಟ್ಟಿದ್ದು ಆಶ್ರಯ ಕಾಲೋನಿಗೆ ಓಡಾಡಲು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ. ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಓಡಾಲು ರಸ್ತೆ ಬಿಡಿಸಿಕೊಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಮಾಡುತ್ತೇವೆ.ಅಲ್ಲದೆ ಜಾಗ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಮುಂದೆ ಹೋರಾಟ ಮಾಡಬೇಕಾಗುತ್ತದೆ. ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾರದಮ್ಮ, ಸರಳಮ್ಮ, ಕೆಂಚಮ್ಮ, ಕಣ್ಮಕ್ಕ, ಶಿವಮ್ಮ, ಶ್ರುತಿ, ರೇಣುಕಾ, ಜಬೀನಬಾನು, ಶಾಹೀನಾಬಾನು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

