March 2, 2026
001

ಹಿರಿಯೂರು:

ಸಮಾಜದಲ್ಲಿ ಅನೇಕ  ಕಡೆ ಬಡವರಿದ್ದು, ಅವರು ನಮ್ಮ ಕಾಂಗ್ರೆಸ್  ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರವು ದೇಶದಲ್ಲಿ ಮೊಟ್ಟಮೊದಲಿಗೆ  ಪಂಚಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಇದರಿಂದ ರಾಜ್ಯದ ಜನತೆಗೆ  ಅದು ವಿಶೇಷವಾಗಿ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ ಎಂಬುದಾಗಿ   ಜಿಲ್ಲಾ ಸಚಿವರಾದ ಡಿ.ಸುಧಾಕರ್ ಅವರು  ಹೇಳಿದರು.

ತಾಲ್ಲೂಕಿನ ಖಂಡೇನಹಳ್ಳಿ ಗ್ರಾಮದ ಖಂಡೇನಹಳ್ಳಿಪಾಳ್ಯದಲ್ಲಿ ಅಕ್ಕಿ ವಿತರಣೆ ಕೇಂದ್ರವನ್ನು  ಉದ್ಘಾಟಿಸಿ  ಅವರು ಮಾತನಾಡಿದರು.

ಸಾರ್ವಜನಿಕರ ಹಿತಕ್ಕಾಗಿ  ಸರ್ಕಾರದ  ಯೋಜನೆಗಳು, ಸರಿಯಾಗಿ ತಲುಪುವಂತೆ ಎಲ್ಲರೂ ಸಹಕರಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು. ಈ ಅಕ್ಕಿ ವಿತರಣೆ  ಕೇಂದ್ರವು ಸ್ಥಳೀಯ  ಸಾರ್ವಜನಿಕರಿಗೆ  ಮುಖ್ಯವಾಗಿ ಸಹಾಯವಾಗಲಿದೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *