June 1, 2026
001

ಹಿರಿಯೂರು:    

ಭಜನೆಗಳನ್ನು ಕೇಳುವುದು ನನಗೆ ತುಂಬಾ ಇಷ್ಟ, ಆದ್ದರಿಂದ ಭಜನೆ ಮಾಡುವುದರಿಂದ, ಕೇಳುವುದರಿಂದ ಆರೋಗ್ಯಕರ ಮನಸ್ಥಿತಿಯನ್ನು ಪಡೆಯಬಹುದು. ನನಗೂ ಸಹ ಮುಂಚೆಯಿಂದಲೂ ಭಜನೆ ಎಂದರೆ ಬಹಳ ಇಷ್ಟ, ಪ್ರತಿಯೊಬ್ಬರೂ ದಿನಕ್ಕೆ ಅರ್ಧ ಗಂಟೆಯಾದರೂ ಭಜನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂಬುದಾಗಿ ಜಿಲ್ಲಾ ಉಸ್ತವಾರಿ ಸಚಿವರಾದ ಡಿ.ಸುಧಾಕರ್  ಹೇಳಿದರು.

ತಾಲ್ಲೂಕಿನ  ವಸಂತನಗರ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಶ್ರೀಪಾಂಡುರಂಗವಿಠಲ ಸಾಂಸ್ಕೃತಿಕ ಭಜನಾ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಒಂದು ಕಲಾ ತಂಡಕ್ಕೆ ನನ್ನ ಸಹಾಯ, ಸಹಕಾರವಿದೆ, ಈ ಊರಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಸಹ ನಾನು ಬಗೆಹರಿಸಿಕೊಡುತ್ತೇನೆ, ಸಾರ್ವಜನಿಕರ ಶ್ರೇಯೋಭಿವೃದ್ಧಿಗಾಗಿ ನಾನು ಸದಾ ಶ್ರಮಿಸುತ್ತೇನೆ, ಯಾವುದೇ ಸಮಸ್ಯೆಯಿದ್ದರೂ ಮುಕ್ತವಾಗಿ ಹೇಳಬಹುದು ಎಂಬುದಾಗಿ ಅವರು  ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಹೆಚ್.ಸಿ.ದಿವುಶಂಕರ್ ಅವರು  ಪ್ರಾಸ್ತಾವಿಕ ನುಡಿಗಳನ್ನಾಡಿದರು.ಜೂನಿಯರ್ ಶಂಕರ್ ನಾಗ್  ಅವರು ಮಾತನಾಡಿದರು.

ಶ್ರೀ ಪಾಂಡುರಂಗ ವಿಠಲ ಭಜನಾ ಸಂಘದವರು ಬರೀವಸಂತನಗರದಲ್ಲೇ ಅಲ್ಲ, ರಾಜ್ಯದ್ಯಂತ ಬೆಂಗಳೂರು ನಗರದಲ್ಲಿ ಸಹ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಭಜನೆಯನ್ನು ಮಾಡಿ ಸಾರಾ ಗೋವಿಂದ್ ಚಲನಚಿತ್ರ ನಿರ್ಮಾಪಕರು ಹಾಗೂ ಡಾ.ರಾಮಚಂದ್ರಹೂಡಿ ಚಿನ್ನಿ ಇವರುಗಳಿಂದಲೂ ಸಹ ಇವರು ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದರಲ್ಲದೆ,

ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ವ್ಯಕ್ತಿಗಳ ಕಡೆಯಿಂದ ಇವರು ಪ್ರಸಂಶೆಯನ್ನು ಪಡೆದಿರುತ್ತಾರೆ ಆದರೆ ಇಂದಿಗೂ ಸಹ ಇವರು ದಾಸಪ್ಪನವರು ಅವರ ತಂಡದವರು ಎಲೆಮರೆಕಾಯಿಯಂತೆ ಇದ್ದಾರೆ ಇನ್ನು ಹೆಚ್ಚಿನ ರೀತಿಯಲ್ಲಿ ಇವರಿಗೆ ಅವಕಾಶಗಳು ಸಿಗಬೇಕಾಗಿದೆ, ಈ ನಿಟ್ಟಿನಲ್ಲಿ ನನ್ನಿಂದೇನದರೂ ಸಹಾಯ ಬೇಕಾದಲ್ಲಿ ಸಂಕೋಚವಿಲ್ಲದೆ ಕೇಳಬಹುದು ಎಂಬುದಾಗಿ ಅವರು  ಹೇಳಿದರು.

ಈ ಕಾರ್ಯಕ್ರಮದಲ್ಲಿ ಎಳೆನೀರು ವೆಂಕಟೇಶ್, ಬೋವಿ ಸಮಾಜದ ಉಪಾಧ್ಯಕ್ಷರು, ಗ್ರಾಮಪಂಚಾಯತಿ ಸದಸ್ಯರು, ಊರಿನ ಮುಖಂಡರು, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಂಜುನಾಥ್,  ಸಂಘದ ಗೌರವಾಧ್ಯಕ್ಷರಾದ ಕೃಷ್ಣಪ್ಪ, ಉಪಾಧ್ಯಕ್ಷರಾದ ಗೋವಿಂದರಾಜು, ಕಾರ್ಯದರ್ಶಿ ಎಲ್ಲಪ್ಪ ರಂಗಸ್ವಾಮಿ, ಶ್ರೀನಿವಾಸ್, ಸಿದ್ದೇಶ್, ಶಂಭು, ಅನೇಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ಇನ್ನು ಹಲವಾರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಊರಿನ ವಸಂತನಗರದ ಸಮಸ್ತ ಗ್ರಾಮಸ್ಥರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಿಸಿದ ಶ್ರೀಮತಿ ಇಂದ್ರಸದ ಚಲನಚಿತ್ರ ಸಹ ನಟಿ ಹಾಗೂ ರಂಗಭೂಮಿ ಕಲಾವಿದರು ಆಗಮಿಸಿದ್ದರು. ಈ ಭಜನಾ ತಂಡದಲ್ಲಿ ಸಾಕಷ್ಟು ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *