March 2, 2026
03

ಹಿರಿಯೂರು:

ಕಾವ್ಯ, ಕಾದಂಬರಿ, ನಾಟಕಗಳು ಸಮಾಜದ ಲ್ಲಿರುವ ಅಂಕುಡೊಂಕು, ಅಸಮಾನತೆ, ಅಸ್ಪೃಷ್ಯತೆ, ಕಂದಾಚಾರ, ರೂಢಿ ಸಂಪ್ರದಾಯಗಳನ್ನು ತೊಡೆದು ವೈಚಾರಿಕತೆಯ ಬದುಕನ್ನು ಸಾಗಿಸಲು ದಾರಿದೀಪವಾಗಬೇಕು ಎಂಬುದಾಗಿ  ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಹಾಗೂ ಜಾನಪದ ತಜ್ಞರಾದ ಡಾ.ಸಿ.ಶಿವಲಿಂಗಪ್ಪ ಅವರು ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳಲಾಗಿದ್ದ  7ನೇ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಉಪನ್ಯಾಸಕರಾದ ಕೆ.ಎಂ.ಜಗನ್ನಾಥ್ ಅವರು ಮಾತನಾಡಿ ಚರಿತ್ರೆ, ಇತಿಹಾಸ ಎಂದಿಗೂ ಅಮರವಾಗಿ ಉಳಿಯಬೇಕಾದರೆ ಜನಸಾಮಾನ್ಯರು ತಲುಪುವ ಕಥೆ, ಕವನ, ಕಾದಂಬರಿಗಳನ್ನು ಕಟ್ಟಬೇಕಾಗುತ್ತದೆ.ಈ ನಿಟ್ಟಿನಲ್ಲಿ ಯುವಕವಿಗಳು ಜಾಗೃತರಾಗಬೇಕು ಎಂಬುದಾಗಿ ಅವರು ಹೇಳಿದರು.

ಈ ಕವಿಗೋಷ್ಠಿಯಲ್ಲಿ ಡಾ.ಜೆ.ತಿಮ್ಮರಾಜು, ಬಬ್ಬೂರುತಿಪ್ಪೀರನಾಯಕ, ಗೀತಾನಾಗಪ್ಪ, ನಿರ್ಮಲಮರಡಿಹಳ್ಳಿ, ಮಾರಿಕಣಿವೆರಾಮಸ್ವಾಮಿ, ದಿವುಶಂಕರ್, ಈರಣ್ಣ, ಎಂ.ಕಿರಣ್ ಮಿರಜ್ಕರ್, ಪ್ರಹ್ಲಾದ್ ಕರಿಓಬನಹಳ್ಳಿ, ಆರ್.ಶಿವಶಂಕರ್ ಸೀಗೇಹಟ್ಟಿ, ಆರ್.ಎ.ಸ್ವಪ್ನ, ಸರಸ್ವತಿ, ರುದ್ರಸ್ವಾಮಿ ಹರ್ತಿಕೋಟೆ, ಮಂಜುನಾಥ್ ಆಲೂರು, ಸಿ.ಕರಿಯಪ್ಪಆಲೂರು, ಶಂಕರ್, ಕೆ.ಶಿವಾನಂದ್, ಎಸ್.ಕೆ.ನಾಗರಾಜು ಸಕ್ಕರ ಹಾಗೂ ಇತರರು ಕವನ ವಾಚನ ಮಾಡಿದರು. ಹೆಚ್.ಶಿವಮೂರ್ತಿ, ಶಫೀವುಲ್ಲ, ಮುದ್ದುರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *