March 2, 2026
000003

ಹಿರಿಯೂರು :

ಪತ್ರಿಕಾ ಧರ್ಮ ಅನ್ನೋದು ಅತ್ಯಂತ ಅಮೂಲ್ಯವಾದದ್ದು, ಅದರಲ್ಲೂ ನಿಮ್ಮಂತ ಯುವಕರು ಸಂಘದ ಚುಕ್ಕಾಣಿ ಹಿಡಿದಿರುವುದು ನಮಗೆಲ್ಲಾ ಸಂತೋಷದ ವಿಚಾರ ಎಂಬುದಾಗಿ ಸಾಮಾಜಿಕ ಚಿಂತಕ ಕಸವನಹಳ್ಳಿ ರಮೇಶ್ ಹೇಳಿದರು.

ನಗರದ ಪ್ರವಾಸ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ನೂತನ ಅಧ್ಯಕ್ಷರಾದ ಎಂ.ಎಲ್.ಗಿರಿಧರ್ ಮತ್ತು ಪ್ರಧಾನ ಕಾರ್ಯದರ್ಶಿ ಚಿದಾನಂದ್ ಮಸ್ಕಲ್ ಇವರಿಗೆ ಸನ್ಮಾನಿಸಿ, ಗೌರವಿಸಿ, ನಂತರ ಅವರು ಮಾತನಾಡಿದರು.

ಈ ನಿಮ್ಮ ಅವಧಿಯಲ್ಲಿ ತಾಲ್ಲೂಕಿನ ಜನರೊಂದಿಗೆ, ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಘವನ್ನು ಬೆಳೆಸಿ, ಪ್ರಜಾಪ್ರಭುತ್ವವನ್ನು ಉಳಿಸಲು ಕೊನೆ ಅಸ್ತ್ರವಾಗಿ ಪತ್ರಿಕಾರಂಗವನ್ನು ಬಳಸಬೇಕು ಎಂಬುದಾಗಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕರಾದ ಮಂಜುನಾಥ್ ಮಾಳಿಗೆ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ.ಹನುಮಂತರಾಯ, ರಾಮಚಂದ್ರಕಸವನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *