ಖಂಡಿಸಿ,ನಗರಸಭೆಮುಂಭಾಗ ರೈತಸಂಘದಿಂದ ಪ್ರತಿಭಟನೆ
ಹಿರಿಯೂರು:
ಅಂಬೇಡ್ಕರ್ ವೃತ್ತದಿಂದ ವೇದಾವತಿ ನದಿ ಸೇತುವೆವರೆಗೆ ನಡೆಯುತ್ತಿರುವ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಕಳೆದರೂ ಕಾಮಗಾರಿ ತ್ವರಿತವಾಗಿ ನಡೆಸದೆ ವಿಳಂಬ ಮಾಡುತ್ತಿದ್ದಾರೆ. ಕಾಮಗಾರಿಯಲ್ಲಿ ತೀವ್ರ ಕಳಪೆ ನಡೆಯುತ್ತಿರುವ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಹಿಸುತ್ತಿಲ್ಲ ಎಂಬುದಾಗಿ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆರೋಪಿಸಿದರು.

ನಗರದ ನಗರಸಭೆ ಆವರಣದಲ್ಲಿ ನಗರದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ, ರೈತಸಂಘದ ವತಿಯಿಂದ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿ, ನಗರಸಭೆ ಅಧ್ಯಕ್ಷ ಬಾಲಕೃಷ್ಣ ಹಾಗೂ ಪೌರಾಯುಕ್ತ ವಾಸೀಂರವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ನಗರದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಮಳೆ ಬಂದು ನೀರು ತುಂಬಿದರೆ ಕೆಸರು ಸಿಡಿಯುತ್ತದೆ ಮತ್ತು ಸರಿಯಾಗಿ ನೀರು ಹಾಕದೆ ಇರುವುದರಿಂದ ಧೂಳು ತುಂಬಿ ನಾಗರೀಕರಿಗೆ ತುಂಬಾ ಅನಾನುಕೂಲವಾಗುತ್ತಿದೆ. ತುರ್ತಾಗಿ ಕಾಮಗಾರಿ ಮುಗಿಸಬೇಕು ಎಂಬುದಾಗಿ ಒತ್ತಾಯಿಸಿದರಲ್ಲದೆ,

ವೇದಾವತಿ ನದಿಯಿಂದ ಗಾಂಧಿವೃತದವರೆಗೆ ರಸ್ತೆ ಅಗಲೀಕರಣ ವಿಚಾರವಾಗಿ ಒತ್ತುವರಿ ಆಗಿರುವ ಬಿಲ್ಡಿಂಗ್ ಗಳನ್ನು ಇದುವರೆಗೂ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡದೇ ಇರುವುದರಿಂದ ನಗರದ ಒಳಗೆ ಬರುವ ವಾಹನಗಳಿಗೆ ತುಂಬಾ ಟ್ರಾಫಿಕ್ ಜಾಮ್ ಆಗುತ್ತಿದ್ದು, ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ,

ಈಗಾಗಲೇ ರೆಡ್ಡಿಹೋಟೆಲ್ ನಿಂದ ಗಾಂಧಿಸರ್ಕಲ್, ಗಾಂಧಿ ಸರ್ಕಲ್ ನಿಂದ ಹುಳಿಯಾರುರಸ್ತೆ ಚಾನೆಲ್ ಹೊರಗೆ ರಸ್ತೆ ಅಗಲೀಕರಣ ಕಾಮಗಾರಿ ರಸ್ತೆ ಹಂಚಿನಿಂದ ಎರಡು ಬದಿಯಲ್ಲೂ ಈ ಕಡೆ ಮೂರು ಮೀಟರ್ ಆ ಕಡೆ ಮೂರು ಮೀಟರ್ ಅಗಲೀಕರಣ ಮಾಡಲಾಗಿದ್ದು, ರಾತ್ರೋರಾತ್ರಿ ಡಾಂಬರೀಕರಣ ಮಾಡಿ ನಿಯಮ ಉಲ್ಲಂಘನೆ ಕಳಪೆ ಕಾಮಗಾರಿ ಮಾಡಿ ಹಣ ಪಡೆಯಲಾಗಿದೆ,
ನಗರದಲ್ಲಿ 12 ಕೋಟಿ ವಿಶೇಷ ಅನುದಾನದಲ್ಲಿ ವಿವಿಧ ಕಾಮಗಾರಿ ನಡೆಸದೇ ಹಣ ಪಡೆದಿರುತ್ತಾರೆ ಎಂದು ಸಾರ್ವಜನಿಕರು ಅಲ್ಲಲ್ಲಿ ಮಾತನಾಡುತ್ತಿದ್ದು, ಇವುಗಳ ಬಗ್ಗೆ ತುರ್ತಾಗಿ ಕ್ರಮವಹಿಸಿ ನಗರದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರೈತಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಸಣ್ಣತಿಮ್ಮಣ್ಣ, ವೀರಣ್ಣಗೌಡ, ಜಯಣ್ಣ, ಜಗನ್ನಾಥ್, ವಿರುಪಾಕ್ಷಪ್ಪ, ಹಳ್ಳಿಕೆರೆತಿಪ್ಪೇಸ್ವಾಮಿ, ರಾಮಣ್ಣ, ಮೀಸೆಗೌಡಪ್ಪ, ಬಾಲಕೃಷ್ಣ, ತಿಮ್ಮಾರೆಡ್ಡಿ, ರಂಗಜ್ಜ, ಜಗದೀಶ್, ನಾಗರಾಜಪ್ಪ, ಶಹಜಾನ್, ಮಂಜುನಾಥ್, ತಿಪ್ಪೇಸ್ವಾಮಿ, ಈರಣ್ಣ, ರಮೇಶ್, ರಾಜಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
