
ಹಿರಿಯೂರು :
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ಬಿ.ಎಸ್, ಪ್ರಧಾನ ಕಾರ್ಯದರ್ಶಿ ವೀರೇಶ್, ರಾಜ್ಯ ಸಮಿತಿ ಸದಸ್ಯರಾದ ಸಿದ್ದರಾಜು ನೇತೃತ್ವದಲ್ಲಿ ನಡೆದ ಹಿರಿಯೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ಹಿರಿಯೂರು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷರಾಗಿ ಸಂಜೆವಾಣಿಯ ಎಂ.ರವೀಂದ್ರನಾಥ್, ಅಧ್ಯಕ್ಷರಾಗಿ ಚಂದ್ರವಳ್ಳಿ ಪತ್ರಿಕೆಯ ಎಂ.ಎಲ್.ಗಿರಿಧರ್, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನಾಚಾರ್, ಬಸವೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ, ಖಜಾಂಚಿಯಾಗಿ ಬಸವರಾಜ್, ಕಾರ್ಯದರ್ಶಿಯಾಗಿ ಹನುಮಂತರಾಯ, ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಡಾ.ವೀರಣ್ಣಧರ್ಮಪುರ, ಪ್ರಕಾಶಬಬ್ಬೂರು, ರಮೇಶ್ ಬಿದರಕೆರೆ, ರಾಜಣ್ಣಹರ್ತಿಕೋಟೆ, ಶಿವಕುಮಾರ್, ಪ್ರವೀಣ್ ಕುಮಾರ್, ಇವರುಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸಿಪಿ ಮಾರುತಿ, ಕಾರ್ಯದರ್ಶಿ ವಿ.ಚಂದ್ರಪ್ಪ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ರವಿಮಲ್ಲಾಪುರ, ಜಿಓಎನ್ ಮೂರ್ತಿ, ಪ್ರಸನ್ನ, ಜಡೇಕುಂಟೆ ಮಂಜುನಾಥ್, ಚೌಳೂರು ಮಂಜುನಾಥ್ ಇತರರು ಉಪಸ್ಥಿತರಿದ್ದರು.

