
ಹಿರಿಯೂರು:
ನಗರದಲ್ಲಿ ನಡೆಯಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಜಿ.ರಂಗಸ್ವಾಮಿ ಅವರನ್ನು “ಕಿರುಸಾಲ” ಚಲನಚಿತ್ರ ತಂಡದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ. ರಂಗಸ್ವಾಮಿ ಅವರು ನನ್ನ ಶಿಕ್ಷಣ ಅವಧಿಯಲ್ಲಿನ ಗುರುಗಳು, ಕುವೆಂಪು ಮುಂತಾದ ಸಾಹಿತಿಗಳು ಹಾಗೂ ಹಿರಿಯೂರಿನ ಹಿರಿಯರ ಒಡನಾಟ ಇಂದು ನನ್ನ ಗೌರವಕ್ಕೆ ಕಾರಣ. ಈ ಗೌರವ ಸ್ಥಾನದಿಂದ ನನ್ನ ಜವಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಾದ ಡಿ.ಸಿ.ಪಾಣಿ, ಚಿತ್ರದ ಕಥಾನಾಯಕರಾದ ಎಂ.ಆರ್ಮುಗಂ, ಶಾಸಕ ಪಾತ್ರಾಧಾರಿಯಾದ ಎನ್.ಎಸ್.ಜೋಧಾ ಹಾಗೂ ಪ್ರಮುಖ ಪಾತ್ರಧಾರಿಯಾದ ಸಿಕಂದರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

