
ಹಿರಿಯೂರು :
ಅಂಬಿಗರ ಚೌಡಯ್ಯ 12 ನೇ ಶತಮಾನದ ಶ್ರೇಷ್ಠ ಶಿವಶರಣ ಹಾಗೂ ವಚನಕಾರರು, ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಠ ವ್ಯಕ್ತಿತ್ವ ಇವರದು, ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಿಂದ ಅನುಭಾವಿಯಾದ ಇವರು ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ, ಇವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಆಡಳಿತಾಧಿಕಾರಿ ಮಧುಮತಿ, ಮಾಜಿ ನಗರಸಭೆ ಅಧ್ಯಕ್ಷರು ಹಾಗೂ ಗಂಗಮತ ಸಮಾಜದ ಅಧ್ಯಕ್ಷರಾದ ಡಿ.ಗಂಗಾಧರ್, ಕಾರ್ಯದರ್ಶಿ ರಾಜಶೇಖರ್, ಮಾಜಿ ನಗರಸಭೆ ಅಧ್ಯಕ್ಷರಾದ ಗೀತಾ ಗಂಗಾಧರ್, ಗಂಗಮತ ಸಮಾಜದ ಮುಖಂಡರುಗಳಾದ ರಂಗಸ್ವಾಮಿ, ಸೋಮಶೇಖರ್, ಶೋಭಾ, ಜ್ಯೋತಿ, ಸುಶೀಲಮ್ಮ, ಸತೀಶ್ ಬಾಬು, ಸುಧಾ, ರೇಣುಕಮ್ಮ, ರತ್ನಮ್ಮ, ಚಂದ್ರಶೇಖರ್, ಮೀನುಗಾರಿಕೆ ಇಲಾಖೆ ಮಂಜುನಾಥ್, ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮೀನಾರಾಯಣ, ಶಿಕ್ಷಣ ಇಲಾಖೆ ರವೀಂದ್ರ ನಾಯ್ಕ, ಶ್ರೀನಿವಾಸ್, ರಮೇಶ್, ಅರಣ್ಯ ಇಲಾಖೆ ಅಂಜಿನಪ್ಪ, ಸಮಾಜ ಕಲ್ಯಾಣ ಇಲಾಖೆ ಸುರೇಶ್ ನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

