March 5, 2026
2

ಹಿರಿಯೂರು:

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ-ಜಿರಾಮ್ ಜಿ ಯೋಜನೆ ಕಾರ್ಮಿಕರ  ಆರ್ಥಿಕ ಸಬಲೀಕರಣಕ್ಕೆ  ಪೂರಕವಾಗಿದ್ದು, ದೇಶದ ಜನತೆ ಕಾಂಗ್ರೆಸ್ ಪಕ್ಷದ ಅಪಪ್ರಚಾರಕ್ಕೆ ಅನುವು  ಕಿವಿಗೊಡಬಾರದು ಎಂಬುದಾಗಿ ಬಿ.ಜೆ.ಪಿ. ತಾಲ್ಲೂಕು ಮಂಡಲಅಧ್ಯಕ್ಷರಾದ ಕೆ.ಅಭಿನಂದನ್ ಅವರು ಮನವಿ ಮಾಡಿದ್ದಾರೆ.

ವಿಬಿ-ಜಿ ರಾಮ್ ಜಿ ಯೋಜನೆಯಡಿ ಉದ್ಯೋಗದ ದಿನಗಳನ್ನು 100ರಿಂದ125 ದಿನಗಳಿಗೆ ಹೆಚ್ಚಿಸಲಾಗಿದೆ. ಹೀಗಾಗಿ, ರೈತರು ಮತ್ತು ಕೃಷಿ ಕಾರ್ಮಿಕರು ಇಬ್ಬರೂ ಸಮಾನವಾಗಿ ಪ್ರಯೋಜನ ಪಡೆಯುವಂತಾಗಿದೆ.

ಯೋಜನೆಯ ಉದ್ದೇಶ  ಯಾವುದೇ ಅವ್ಯವಸ್ಥೆ ಸೃಷ್ಟಿಸುವುದಿಲ್ಲ.  ಬದಲಾಗಿ ಪಾರದರ್ಶಕತೆ , ಹೆಚ್ಚು ಉದ್ಯೋಗವಕಾಶ ಹಾಗೂ ಸಕಾಲಿಕ ವೇತನ ಪಾವತಿಯನ್ನು  ಖಚಿತಪಡಿಸುವುದಾಗಿದೆ. ಕೇಂದ್ರದ ಜನಪರ ಯೋಜನೆಯನ್ನು ಸಹಿಸದ ರಾಜ್ಯ ಕಾಂಗ್ರೆಸ್  ತನ್ನ ಆಡಳಿತದ ವೈಫಲ್ಯಗಳನ್ನು  ಮುಚ್ಚಿಕೊಳ್ಳಲು ಅಪಪ್ರಚಾರದಲ್ಲಿ  ತೊಡಗಿದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನೇತೃತ್ವದ  ಯು.ಪಿ.ಎ.ಸರ್ಕಾರ ಮನರೇಗಾ ಯೋಜನೆಗೆ 2013-14ರಲ್ಲಿ ಕೇವಲ 33ಸಾವಿರ ಕೋಟಿ ಅನುದಾನ ನೀಡಿದ್ದರೆ, ಮೋದಿ ಸರ್ಕಾರವು ವಿಬಿ-ಜಿರಾಮ್ ಜಿ. ಯೋಜನೆಗೆ 2.86ಲಕ್ಷ ಕೋಟಿ ಮೀಸಲಿಟ್ಟಿದೆ.ಎಂದರಲ್ಲದೆ,

2014ರಲ್ಲಿ 1.66 ಕೋಟಿ ಇದ್ದ ಕೆಲಸದ ದಿನಗಳನ್ನು 3.10 ಕೋಟಿ ದಿನಗಳಿಗೆ ಹೆಚ್ಚಿಸಿದೆ. ಯಾರಿಂದ ಯೋಜನೆ ಸಮಾಧಿಯಾಗಿದೆಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಬೇಕು ಎಂಬುದಾಗಿ ಅವರು ಸವಾಲು ಹಾಕಿದ್ದಾರೆ.

About The Author

Leave a Reply

Your email address will not be published. Required fields are marked *