
ಹಿರಿಯೂರು :
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಅಪೂರ್ಣಗೊಂಡ ಹೊಸ ಕಟ್ಟಡದ ಉದ್ಘಾಟನೆಯನ್ನು ತಡೆಹಿಡಿಯುವ ಕೆಲಸವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾಡಬೇಕು ಎಂಬುದಾಗಿ ಪವರ್ ಫೋಕಸ್ ನ್ಯೂಸ್ ಸಂಪಾದಕರಾದ ಅರ್ಜುನ್ ವಿ. ಬ್ಯಾಡರಹಳ್ಳಿ ಮನವಿ ಮಾಡಿದ್ದಾರೆ.
ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಹೊಸ ಕಟ್ಟಡದ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿರುವುದು ಸಚಿವರ ಗಮನಕ್ಕೆ ಬಂದಿರಬಹುದು. ಆದರೆ ಕಟ್ಟಡದ ಕ್ಯೂರಿಂಗ್, ವಿದ್ಯುತ್ ಸಂಪರ್ಕ, ಟೈಲ್ಸ್ ಮತ್ತು ಕಿಟಕಿ-ಬಾಗಿಲುಗಳ ಅಳವಡಿಕೆ ಇನ್ನೂ ಬಾಕಿ ಇದೆ. ಮೇಲ್ಭಾಗದ ಫ್ಲೋರ್ ಮತ್ತು ಇಂಟೀರಿಯರ್ ಕೆಲಸಗಳು ಕೂಡ ಪೂರ್ಣಗೊಂಡಿಲ್ಲ.
ಒಮ್ಮೆ ಕಟ್ಟಡ ಉದ್ಘಾಟನೆಯಾದರೆ, ಬಾಕಿ ಉಳಿದಿರುವ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲು ತಾಂತ್ರಿಕ ತೊಂದರೆಗಳಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಪಂಚಾಯಿತಿಯ ಅಭಿವೃದ್ಧಿಗೆ ಮಾರಕವಾಗಬಹುದು.
ಸಾರ್ವಜನಿಕ ಹಿತದೃಷ್ಟಿಯಿಂದ ಅಪೂರ್ಣ ಕಟ್ಟಡವನ್ನು ಅವಸರದಲ್ಲಿ ಉದ್ಘಾಟಿಸುವುದು ಆಡಳಿತಾತ್ಮಕವಾಗಿ ಸರಿಯಲ್ಲ. ಗುಣಮಟ್ಟದ ಕೆಲಸ ಮುಗಿದ ನಂತರವೇ ಲೋಕಾರ್ಪಣೆ ಮಾಡುವುದು ಸೂಕ್ತವಾಗಿದೆ.
ಆದ್ದರಿಂದ, ತಾವು ಮಧ್ಯಪ್ರವೇಶಿಸಿ ಈ ಕೆಲಸಗಳು ಸಂಪೂರ್ಣವಾಗಿ ಮುಗಿಯುವವರೆಗೆ ಉದ್ಘಾಟನೆಯನ್ನು ಮುಂದೂಡಲು ಅಧಿಕಾರಿಗಳಿಗೆ ಸೂಚಿಸಬೇಕು, ತಪ್ಪಿದಲ್ಲಿ, ಅನಿವಾರ್ಯವಾಗಿ ನಾವು ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂಬುದಾಗಿ ಅವರು ಸಚಿವ ಡಿ.ಸುಧಾಕರ್ ರವರಿಗೆ ತಿಳಿಸಿದ್ದಾರೆ.
