March 2, 2026
0002

ಹಿರಿಯೂರು:

ಭಾರತೀಯ ಭಾಷಾ ಪರಿವಾರ ರಾಷ್ಟ್ರೀಯ ಸಮ್ಮೇಳನದ ಸಮಾರೋಪ, ಹಿರಿಯೂರು ತಾಲ್ಲೂಕಿನ ಭೀಮನಬಂಡೆ  ಸಮೀಪದ ಯಜ್ಞವಲ್ಕ್ಯ ಪಿ.ಯು. ಕಾಲೇಜಿನಲ್ಲಿ  ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮವು ಭಾರತೀಯ ಭಾಷೆಗಳ ಪ್ರಚಾರ ಮತ್ತು ಸಂರಕ್ಷಣೆಗೆ  ಮೀಸಲಾಗಿರುವ ಉನ್ನತ ಮಟ್ಟದ ಶೈಕ್ಷಣಿಕ ಪ್ರಗತಿಯ ಪರಾಕಾಷ್ಠೆ ಗುರುತಿಸಿತು. ಅಧಿವೇಶನವು ಸಾಂಪ್ರದಾಯಿಕ ಪ್ರಾಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಸಮ್ಮೇಳನದ ನಡಾವಳಿಗಳ  ಸಾರಾಂಶವನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಗಣ್ಯ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಭಾಷಾ ಉತ್ಸಾಹಿಗಳು ಸಕ್ರೀಯವಾಗಿ ಭಾಗವಹಿಸಿದ್ದರು. ಎಲ್ಲರೂ ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ಭಾರತೀಯ ಭಾಷೆಗಳ ಪಾತ್ರದ ಕುರಿತು ಚರ್ಚಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಮುರುಗೆಪ್ಪ ಅವರು ಮಾತನಾಡಿ  ಭಾರತದ ಸಾಂಸ್ಕೃತಿಕ ಬೇರುಗಳನ್ನು ಬಲಪಡಿಸುವಲ್ಲಿ  ಭಾರತೀಯ ಭಾಷಾ ಶಾಸ್ತ್ರದ  ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು.

ಮಾತೃ ಭಾಷೆಗಳನ್ನು ಮುಖ್ಯವಾಹನಿಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸಂಯೋಜಿಸಲು  ಸಾಮೂಹಿಕ ಪ್ರಯತ್ನಗಳಿಗೆ  ಕರೆ ನೀಡಿದರು. ಪ್ರಸಿದ್ಧ ಭಾಷಣಕಾರರು  ಹಂಚಿಕೊಂಡಿರುವ ಸಮ್ಮೇಳನದ ಫಲಿತಾಂಶಗಳ ಕುರಿತು ಚಿಂತನೆಗಳು, ಪ್ರಬಂಧ ಪ್ರಸ್ತುತಿಗಳು ಮತ್ತು ವಿದ್ವತ್ಪೂರ್ಣ ಸಂವಾದಗಳ ಉತ್ತಮ ಗುಣಮಟ್ಟ  ಶ್ಲಾಘಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರಗಳ ವಿತರಣೆಯೊಂದಿಗೆ ಕಾರ್ಯಕ್ರಮವು ಮುಕ್ತವಾಯಿತು.

About The Author

Leave a Reply

Your email address will not be published. Required fields are marked *