March 2, 2026
0004

ಹಿರಿಯೂರು:

ತಾಲ್ಲೂಕಿನಲ್ಲಿ 66 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿದಿನ 65 ಲೀಟರ್ ಸಾವಿರ ಗುಣಮಟ್ಟದ  ಹಾಲು ಉತ್ಪಾದನೆಯಾಗುತ್ತಿದೆ ಎಂಬುದಾಗಿ ಶಿಮುಲ್  ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ ಅವರು ಹೇಳಿದರ.

ನಗರದ ಅನ್ನಪೂರ್ಣೇಶ್ವರಿ  ಖಾಸಗಿ ಹೋಟೆಲ್  ನಲ್ಲಿ   ಹೋಟೆಲ್ ನಲ್ಲಿ  ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ  ಮಾಸಿಕ  ಪ್ರಗತಿ ಪರಿಶೀಲನಾ ಸಭೆ ಹಾಗೂ ಶಿಮುಲ್ ಕ್ಯಾಲೆಂಡರ್  ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ  ಕಾರ್ಯದರ್ಶಿಗಳು 15 ವರ್ಷ  ಸೇವೆ ಸಲ್ಲಿಸಿದವರಿಗೆ  ಮಾತ್ರ ನಿವೃತ್ತಿ  ವೇತನ ನೀಡಲಾಗುತ್ತಿದೆ. ಕಾರ್ಯದರ್ಶಿಗಳ ಬೇಡಿಕೆಯಂತೆ 10ರಿಂದ 15ವರ್ಷದೊಳಗೆ ನಿವೃತ್ತಿ  ಹೊಂದಿರುವವರಿಗೂ  ಸಹ ನಿವೃತ್ತಿ ವೇತನ ಶ್ರೇಣಿ ನೀಡುವಂತೆ  ಆಡಳಿತ ಮಂಡಳಿಯಲ್ಲಿ  ಚರ್ಚಿಸಲಾಗುವುದು ಎಂಬುದಾಗಿ ಅವರು ಭರವಸೆ ನೀಡಿದರು.

ತಾಲ್ಲೂಕಿಗೆ ಎರಡು-ಮೂರು ಬಿ.ಎಂ.ಸಿ. ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ರಬ್ಬರ್ ಮ್ಯಾಟ್ ಸಮಸ್ಯೆ ಕೇಳಿಬಂದಿದ್ದು, ಇದೀಗ 50ಸಾವಿರ ರಬ್ಬರ್ ಮ್ಯಾಟ್ ಟೆಂಡರ್ ಕರೆಯಲಾಗಿದೆ. ಮ್ಯಾಟ್ ಕೊಳ್ಳಲು  ರೈತರು ಮುಂದಾಗಬೇಕು. ನಗರದ ಎ.ಪಿ.ಎಂ.ಸಿ.ಆವರಣದಲ್ಲಿ  ನಿವೇಶನವಿದ್ದು, ಪ್ರಸಕ್ತ ಸಾಲಿನಲ್ಲಿ  ಕಚೇರಿ ನಿರ್ಮಾಣ ಮಾಡಿ, ಅದೇ ಕಚೇರಿಯಲ್ಲಿ  ಮುಂದಿನ  2027 ರ ವರ್ಷದ ಕ್ಯಾಲೆಂಡರ್  ಬಿಡುಗಡೆ  ಮಾಡಲಾಗುವುದು.

ಹಾಲಿನ ಉತ್ಪಾದನೆ ಹೆಚ್ಚಳಕ್ಕೆ  ಐದಾರು ಸೊಸೈಟಿಗಳು ಪುನಶ್ಚೇತನಗೊಳ್ಳಬೇಕಿದೆ. ಹೈನುಗಾರಿಕೆಯಲ್ಲಿ  ಬದಲಾವಣೆಯಾದಾಗ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತವೆ ಎಂಬುದಾಗಿ ಅವರು ಹೇಳಿದರು.

ಹೊಳೆಲ್ಕೆರೆ ವಿಭಾಗದ ವಿಮುಲ್ ನಿರ್ದೇಶಕ ಜಿ.ಬಿ.ರಾಜಶೇಖರಪ್ಪ ಅವರು ಮಾತನಾಡಿ ಹೈನುಗಾರಿಕೆ ಕೇವಲ ಉಪಕಸುಬು ಅಲ್ಲ. ಅದೊಂದು ಪ್ರಮುಖ ಜೀವನಾಧಾಋ. ಸಣ್ಣ ಮತ್ತು ಅತಿ ಸಣ್ಣ ರೈತರು ಹೈನುಗಾರಿಕೆಯಿಂದ ಪ್ರತಿ 15 ದಿಗಳಿಗೊಮ್ಮೆ  ಆದಾಯ ಪಡೆಯಲು ಸಹಕಾರ ಸಂಘಗಳು ವೇದಿಕೆಯಾಗಿವೆ. ತಾಲ್ಲೂಕಿಲ್ಲಿ 66 ಹಾಲಿನ ಡೈರಿಗಳಿಂದ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ.

ಹಾಲು ಉತ್ಪಾದಕರ ಸಮಸ್ಯೆಗಳು ಕಂಡು ಬಂದಲ್ಲಿ ಅವುಗಳನ್ನು ತ್ವರಿತವಾಗಿ  ಬಗೆಹಿಸಲಾಗುವುದು. ಗುಣಮಟ್ಟದ ಮ್ಯಾಟ್ ವಿತರಣೆಗೆ ಕ್ರಮ ವಹಿಸಲಾಗಿದೆ. ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ಶಿಮುಲ್ ಮಾಜಿ ಅಧ್ಯಕ್ಷರು ಹಾಗೂ  ಹಾಲಿ ನಿರ್ದೇಶಕರಾದ ಜಿ.ಪಿ. ರೇವಣಸಿದ್ಧಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ   ಮಾತನಾಡಿ  ಸಹಕಾರ ಸಂಘಗಳು ಉಳಿದರೆ  ಗ್ರಾಮೀಣ ಪ್ರದೇಶದ ಆರ್ಥಿಕ  ಪ್ರಗತಿ ಸಾಧ್ಯ. ನಾವು ಚುನಾವಣೆ ಸಂದರ್ಭದಲ್ಲಿ ನುಡಿದಂತೆ ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ. ಹಾಲು ಉತ್ಪಾದಕರ ಸಮಸ್ಯೆಗಳನ್ನು  ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದರಲ್ಲದೆ,

ತಾಲ್ಲೂಕಿನ ರೈತರು ಕೃಷಿಯೊಂದಿಗೆ ದೊಡ್ಡ ಮಟ್ಟದಲ್ಲಿ  ಹೈನುಗಾರಿಕೆ, ಪಶುಪಾಲನೆಯಲ್ಲಿ  ತಮ್ಮನ್ನು ತೊಡಗಿಸಿಕೊಂಡಿದ್ದು, ಆರ್ಥಿಕವಾಗಿ ಸಧೃಢರಾಗಲು  ನೆರವಾಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ  ಪ್ರತ್ಯೇಕ  ಹಾಲ ಒಕ್ಕೂಟ ನಿರ್ಮಾಣಕ್ಕೆ  ಶೀಘ್ರದಲ್ಲೇ  ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಕೆ.ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹೊಸದುರ್ಗ ವಿಸ್ತರಣಾಧಿಕಾರಿ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ  ಚಳ್ಳಕೆರೆ ಉಪವಿಭಾಗಾಧಿಕಾರಿ  ಪುಟ್ಟರಾಜು, ಮಾರ್ಗ ವಿಸ್ತರಣಾಧಿಕಾರಿ  ಕೃಷ್ಣಕುಮಾರ್, ಪಶುವೈದ್ಯ ನರೇಶ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಗುಣಶೇಖರ್, ಮಲ್ಲೇಶಪ್ಪ, ಬಿ.ನಿರಂಜನ್ ಮೂರ್ತಿ,  ಜೆ.ಜಿ.ಹಳ್ಳಿ ಗೋವಿಂದರಾಜು, ಸುರೇಶ್ ಬಾಬು  ಸೇರಿದಂತೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳುಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *