
ಹಿರಿಯೂರು:
ಜ್ಞಾನಭಂಡಾರ ಎಲ್ಲರಲ್ಲೂ ಸುಪ್ತವಾಗಿ ಅಡಗಿರುತ್ತದೆ. ಅದನ್ನು ಜಾಗೃತಗೊಳಿಸಲು ಅರಿವು ಹರಿಯಬೇಕಾಗುತ್ತದೆ. ಆ ಹರಿಗೋಲೆ ಶರಣರ ವಚನಗಳು ಆ ಹರಿಗೋಲ ಹಿಡಿದು ಸಂಸಾರವೆಂಬ ದೋಣಿಯಲ್ಲಿ ಕುಳಿತ ನಾವು ಭವಸಾಗರವ ದಾಟಬೇಕು ಎಂಬುದಾಗಿ ಪರಮಪೂಜ್ಯ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಅವರು ಹೇಳಿದರು.
ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿರುವ ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಜ್ಞಾನದ ಬೆಳಕು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನ ಮಲೀನವಾದಲ್ಲಿ ಶರಣರ ವಚನ ಪಾರಾಯಣ ಮತ್ತು ಶರಣರ ಸಂಘ ಮಾಡಬೇಕು ಎಂಬುದಾಗಿ ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ ಜಾನಪದ ಗಾಯಕ ಗೋಂದಾಳಪ್ಪ ಮಾತನಾಡುತ್ತಾ ಅರಿವೇ ಗುರು ಎಂದರು. ಸಹ ಶಿಕ್ಷಕರಾದ ಅನಿತಾ ಭಾನು, ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

