March 2, 2026
01

ಹಿರಿಯೂರು:

ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಬೇಕು. ನಾವು ಅಮೆರಿಕದಲ್ಲಿದ್ದರೂ ಸಹ ಕನ್ನಡ ರಾಜ್ಯೋತ್ಸವ, ಕನ್ನಡ ಕಾರ್ಯಕ್ರಮ ಇತ್ಯಾದಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ. ಕನ್ನಡದವರೆಲ್ಲ ಒಟ್ಟಾಗಿ ಹಬ್ಬ, ಹರಿದಿನಗಳನ್ನು   ಆಚರಿಸುತ್ತೇವೆ. ಕನ್ನಡದ ಬಗ್ಗೆ ಚರ್ಚಾಗೋಷ್ಠಿ ,ಹಾಡುಗಳು , ಸಂವಾದ ಕಾರ್ಯಕ್ರಮ ನಡೆಸುತ್ತೇವೆ ಎಂಬುದಾಗಿ ಅಮೆರಿಕಾದ ಅಟ್ಲಾಟದಲ್ಲಿ ನೆಲೆಸಿರುವ ಕನ್ನಡಿಗ ಶ್ರೀನಾಥ್ ರಂಗಸ್ವಾಮಿ ಹೇಳಿದರು.

ತಾಲ್ಲೂಕಿನ ಕಸವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ  ಅಮೆರಿಕಾದ ಅಟ್ಲಾಟದಲ್ಲಿ ನೆಲೆಸಿರುವ ಕನ್ನಡಿಗ ಶ್ರೀನಾಥ್ ರಂಗಸ್ವಾಮಿ ಭೇಟಿಕೊಟ್ಟು ಶಾಲಾ ಮಕ್ಕಳ ಜೊತೆಯಲ್ಲಿ ಭೋಜನ ಸ್ವೀಕರಿಸಿ, ಹೊಸ ವರ್ಷದ ಶುಭಾಶಯ ಕೋರಿ, ಶಾಲಾ ಮಕ್ಕಳೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ರೈತ ಹೋರಾಟಗಾರರಾದ  ಕಸವನಹಳ್ಳಿರಮೇಶ್, ಮುಖ್ಯ ಶಿಕ್ಷಕರಾದ ರಂಗನಾಥ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಂಜುನಾಥ್, ಸಿ.ಆರ್.ಪಿ., ರಾಮಚಂದ್ರಕಸವನಹಳ್ಳಿ, ಶ್ರೀನಿವಾಸ್, ಸಹಶಿಕ್ಷಕ  ಬಸವರಾಜ್ ,ಗ್ರಾಮಸ್ಥರು ಅಂಗನವಾಡಿ ಶಿಕ್ಷಕಿ, ಮಕ್ಕಳು  ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *