
ಹಿರಿಯೂರು:
ನೀರಿಗೆ ಭಕ್ತಿ ಬೆರೆಸಿದರೆ ತೀರ್ಥವಾಗುತ್ತದೆ, ಅನ್ನಕ್ಕೆ ಭಕ್ತಿ ಬೆರೆಸಿದರೆ ಪ್ರಸಾದವಾಗುತ್ತದೆ, ಮಾಡುವ ಕೆಲಸಕ್ಕೆ ಶ್ರದ್ದೆ ಬೆರೆಸಿದರೆ ಯಶಸ್ಸು ನಮ್ಮದಾಗುತ್ತದೆ, ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಾಗಿ ಶ್ರೀಮಾತಾ ಚೈತನ್ಯಮಯಿ ಹೇಳಿದರು.
ಶ್ರೀ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃ ಶ್ರೀ ಹೇಮಾವತಿಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಹಿರಿಯೂರು ಇವರ ಸಂಯುಕ್ತಾಶ್ರಯದಲ್ಲಿ ನಡೆಯುವ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಆದಿವಾಲ ವಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಯರಗುಂಟೇಶ್ವರಸ್ವಾಮಿ ಮತ್ತು ಶ್ರೀಕರಿಯಮ್ಮ ದೇವಿಯ ಪೂಜಾ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಮಾತನಾಡಿ, ದೇವರು ನಮ್ಮಲ್ಲಿಯೇ ಇದ್ದಾರೆ, ಆದರೆ ನಾವು ಮರೆತಿದ್ದೇವೆ, ಪೂಜೆಗಳನ್ನು ಮಾಡುವುದರ ಮೂಲಕ ದೇವರು ನಮಗೆ ಹತ್ತಿರವಾಗುತ್ತಾರೆ, ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಿದರೆ, ದೇವರು ಸದಾ ನಮ್ಮೊಂದಿಗೆ ಇರುತ್ತಾರೆ, ಮಹಿಳೆಯರಿಗೆ ಸ್ವಾವಲಂಬನೆ ಇಂದ ಜೀವನ ನಡೆಸಿದರೆ ಸಾರ್ಥಕತೆಯನ್ನು ಪಡೆಯಬಹುದು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀಮತಿ ವಿನೋದಮ್ಮ, ಗ್ರಾಮ ಪಂಚಾಯತ್ ಆದಿವಾಲ ಸೈಯದ್ ಮುನೀರ್ ಭಾಷ, ಆದಿವಾಲ ಗ್ರಾಮ ಪಂಚಾಯತ್ ಸದಸ್ಯರುರಾದ ಕಿರಣ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ತ್ರಿಯಂಬಕ ಮೂರ್ತಿ, ಹಿರಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬೀಬಿಜಾನ್, ಯೋಜನಾಧಿಕಾರಿಗಳಾದ ರವಿ, ಹಿತ್ತಲಮನಿ ಸಂಘದ ಮೇಲ್ವಿಚಾರಕರಾದ ಕಾವ್ಯ, ತೋಟಯ್ಯ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

