March 5, 2026
0006

ಹಿರಿಯೂರು:

ನಗರದ ನಗರಸಭೆ  ವ್ಯಾಪ್ತಿಯಲ್ಲಿ  ಪ್ರತಿ ಶನಿವಾರ ಸ್ವಚ್ಚತಾ ಇ-ಸೇವಾ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು, ಇದರ ಅಡಿಯಲ್ಲಿ  ನಮ್ಮ ಚಿತ್ತ ಸ್ವಚ್ಚತೆಯತ್ತ ಕಾರ್ಯಕ್ರಮವನ್ನು ಹೊಸ ವರ್ಷದ  ಹಿನ್ನಲೆಯಲ್ಲಿ  ನಗರದ ವಾರ್ಡ್ ನಂ.07ರಲ್ಲಿ ಮೈಲಾರಲಿಂಗೇಶ್ವರ  ದೇವಸ್ಥಾನ, ವಾರ್ಡ್ ನಂ.10 ನೇಕ್  ಬೀ ಬೀ ದರ್ಗಾ ಮತ್ತು ವಾರ್ಡ್ ನಂ.26ರ ಚರ್ಚ್ ನಲ್ಲಿ ಸ್ವಚ್ಚಗೊಳಿಸುವ ಮೂಲಕ ಈ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

 ಈ ಸಂದರ್ಭದಲ್ಲಿ ಪೌರಾಯುಕ್ತರಾದ ಎ.ವಾಸೀಂ, ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರುಗಳಾದ  ಸುನೀಲ್ ಕುಮಾರ್, ಮಹಾಲಿಂಗರಾಜು, ನಯಾಜ್, ಶರೀಫ್ ಮತ್ತು ದಫೇದಾರರುಗಳು ಹಾಗೂ ಪೌರಕಾರ್ಮಿಕರು 07,08ಮತ್ತು 26 ವಾರ್ಡ್ ನ  ಸಾರ್ವಜನಿಕರು ಹಾಗೂ ಸಮಘ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About The Author

Leave a Reply

Your email address will not be published. Required fields are marked *