
ಹಿರಿಯೂರು:
ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕರಾದ ಹೆಚ್.ಕರಿಯಪ್ಪ (95)ಇವರು ಶುಕ್ರವಾರ ತಡರಾತ್ರಿಯಲ್ಲಿ ವಯೋಸಹಜವಾದ ಕಾಯಿಲೆಯಿಂದ ನಿಧನರಾಗಿದ್ದಾರೆ ಎಂಬುದಾಗಿ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಮೃತರು ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್, ತನಿಖಾಧಿಕಾರಿಯಾಗಿ ನಂತರ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ ಗ್ರಾಮದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಅನೇಕ ಪೌರಾಣಿಕ ನಾಟಕಗಳಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಜನರನ್ನು ರಂಜಿಸುತ್ತಿದ್ದರು ಎನ್ನಲಾಗಿದ್ದು,ಅವರ ನಿಧನಕ್ಕೆ ಗ್ರಾಮದ ಜನತೆ ತೀವ್ರ ಕಂಬನಿಮಿಡಿದಿದ್ದಾರೆ.
ಮೃತರು ಅಪಾರ ಬಂಧುಮಿತ್ರರುಗಳನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆಯನ್ನು ಶನಿವಾರ ನಡೆಸಲಾಯಿತು ಎಂಬುದಾಗಿ ಕುಟುಂಬ ವರ್ಗದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

