March 2, 2026
00000005

ಹಿರಿಯೂರು:

ತಾಲ್ಲೂಕಿನ ರೈತಬಾಂಧವರು ಈ ತೊಗರಿ ಖರೀದಿ ಕೇಂದ್ರಕ್ಕೆ ಬಂದು ತಮ್ಮ ದಾಖಲೆಗಳೂಂದಿಗೆ ನೋಂದಣಿ ಮಾಡಿಸಿಕೊಂಡು ಸರ್ಕಾರದ ಬೆಂಬಲ ಬೆಲೆ ರೂ.8000 ರೂಗಳಿಗೆ ಮಾರಾಟಮಾಡುವ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದಾಗಿ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು

ತಾಲ್ಲೂಕಿನ ಎ.ಪಿ.ಎಂ.ಸಿ. ಮಾರುಕಟ್ಟೆ ಸಮಿತಿ ಆವರಣದಲ್ಲಿ  ಜಿಲ್ಲಾ ಟಾಸ್ಕ್  ಪೋರ್ಸ್ ಸಮಿತಿ ಚಿತ್ರದುರ್ಗ, ನ್ಯಾಪೇಡ್/ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ನಿ ಬೆಂಗಳೂರುಮತ್ತು ಚಿತ್ರದುರ್ಗ ಶಾಖೆ ಈಶ ರೈತ ಉತ್ಪಾದನಾ ಕೇಂದ್ರ ಇವರುಗಳ ಸಹಭಾಗಿತ್ವದಲ್ಲಿ ತೊಗರಿ ಖರೀದಿ ಕೇಂದ್ರದ ತೊಗರಿ ಬೇಳೆ ರೈತರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಂಟಿಕೃಷಿ ನಿರ್ದೇಶಕರಾದ  ಮಂಜುನಾಥ ಅವರು ಮಾತನಾಡಿ, ರೈತಬಾಂಧವರು ತಮ್ಮ ಆಧಾರ್ ಕಾರ್ಡ್., ಪಹಣಿ ಮತ್ತು ಎಫ್.ಐ.ಡಿ ದಾಖಲೆಗಳೂಂದಿಗೆ ಈಶ ರೈತ ಉತ್ಪಾದಕ ಸಂಸ್ಥೆ ಹಿರಿಯೂರು ಇವರಿಗೆ ಸಲ್ಲಿಸಿ ನೋಂದಾಯಿಸಿಕೊಳ್ಳಲು ಹಾಗೂ ಸರ್ಕಾರದ ನಿಯಮದಂತೆ ಗುಣಮಟ್ಟದ  ತೊಗರಿಯನ್ನು ಕೇಂದ್ರ ನೀಡಲು ರೈತರಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘ ಮಹಾಮಂಡಲ ಬೆಂಗಳೂರು, ನಿರ್ದೇಶಕರಾದ ಕೆ.ಜಗದೀಶಕಂದಿಕೆರೆ ಅವರು ಮಾತನಾಡಿ,  ತಾಲ್ಲೂಕಿನ ರೈತಬಾಂದವರು ಸರ್ಕಾರದ ಮತ್ತು ನಮ್ಮ ಸಚಿವರ ಪರಿಶ್ರಮದಿಂದ ತಾಲ್ಲೂಕಿನ ತೊಗರಿ ಬೆಳೆ ರೈತಭಾಂದವರಿಗೆ ಖರೀದಿಕೇಂದ್ರ ಬಂದಿದ್ದು ಇದಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಹಕಾರದಿಂದ ಬಂದಿದೆ. ಉತ್ತಮ ಬೆಲೆ ರೂ.8000ಗಳ ಬೆಂಬಲೆ ಬೆಲೆಯೊಂದಿಗೆ ಖರೀದಿಯಿಂದ ರೈತರಿಗೆ ಅನುಕೂಲವಾಗುತ್ತದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು

ಈ ಸಂದರ್ಭದಲ್ಲಿ ತಹಶೀಲ್ದಾರ್  ರಾದ ಎಂ.ಸಿದ್ದೇಶ್,  ಸಹಾಯಕ ಕೃಷಿ ನಿರ್ದೇಶಕರು ಹಿರಿಯೂರು ಆರ್.ಅಶೋಕ್ ಹಾಗೂ ಸಿಬ್ಬಂದಿಗಳು, ಎ.ಪಿ.ಎಂ.ಸಿ. ಕಾರ್ಯದರ್ಶಿ ಹರ್ಷ,  ನಗರಸಭೆ ಪೌರಾಯುಕ್ತರಾದ ವಾಸೀಂ,    ಬಸವೇಶ್ವರ ನ್ಯಾಪೇಡ್  ಚಿತ್ರದುರ್ಗ , ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ  ಖಾದಿ ಜೆ.ರಮೇಶ್,   ಮಹೇಶ್ ದಿಂಡಾವರ,  ಆರ್.ಸರಸ್ಪತಿ,  ಅಧ್ಯಕ್ಷರಾದ ಜಗದೀಶ್, ಸಿ.ಇ.ಓ. ಮುರುಳಿಯಾದವ್, ಹಾಗೂ ಸಿಬ್ಬಂದಿ ಈಶ ರೈತ ಉತ್ಪಾದಕ ಕೇಂದ್ರ ರೈತ ಮುಖಂಡರುಗಳು ಹಾಗೂ ಹಲವು ರೈತಭಾಂದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *