
ಹಿರಿಯೂರು:
ದಕ್ಷಿಣ ಕಾಶಿ ಎಂದೇ ಪ್ರಸಿದ‍್ಧಿಯಾಗಿರುವ ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ನೆಲೆಸಿರುವ ಶ್ರೀಕಾಳಿಕಾಂಬದೇವಿ ಕಡೆ ಕಾರ್ತಿಕೋತ್ಸವ ಅತ್ಯಂತ ವೈಭವದಿಂದ ನೆರವೇರಿತು.
ಉತ್ಸವದ ಪ್ರಯುಕ್ತ ಶ್ರೀ ಕಾಳಿಕಾಂಬ ದೇವರಿಗೆ ಅರ್ಚನೆ, ಅಭಿಷೇಕ, ವಿಶೇಷಅಲಂಕಾರ ಮಾಡಲಾಗಿತ್ತು. ಕಲ್ಲುಕಂಬದ ದೀಪೋತ್ಸವ, ಮಹಿಳಾ ಭಜನಾ ಮಂಡಳಿ, ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯಿಂದ ಭಜನೆ ನಡೆಯಿತು.
ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
