
ಹಿರಿಯೂರು :
ಶ್ರೀಪಾರಿಜಾತ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಕಾರ್ತಿಕ ಮಾಸದ ಕಾರ್ತಿಕೋತ್ಸವ ಪೂಜಾ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಅದರಂತೆ ಈ ವರ್ಷವು ಸಹ ಕಾರ್ತಿಕ ಮಾಸದ ಪೂಜೆಯನ್ನು ಶ್ರೀ ಪಾರಿಜಾತಆಂಜನೇಯಸ್ವಾಮಿಗೆ ನಡೆಸಲಾಗುತ್ತಿದೆ ಎಂಬುದಾಗಿ ಶ್ರೀಮತಿರುಕ್ಮಿಣಿಯಮ್ಮ, ಹೆಚ್.ಸಿ. ಸತ್ಯನಾರಾಯಣಶೆಟ್ಟಿ ಚಾರಿಟಬಲ್ ಟ್ರಸ್ಟ್ ಮತ್ತು ಕುಟುಂಬ ಮುಖ್ಯಸ್ಥರಾದ ಹೆಚ್.ಎಸ್.ನಾಗರಾಜ್ ಗುಪ್ತಾ ಹೇಳಿದರು.
ನಗರದ ಅವಧಾನಿ ಬಡಾವಣೆಯ ಶ್ರೀಪಾರಿಜಾತ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಮತ್ತು ಆಂಜನೇಯಸ್ವಾಮಿಗೆ ವಿಶೇಷ ಪೂಜಾಕಾರ್ಯಕ್ರಮ ಹಾಗೂ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೆಳಗ್ಗೆ 7ಗಂಟೆಗೆ ಶ್ರೀ ಪಾರಿಜಾತ ಆಂಜನೇಯಸ್ವಾಮಿಗೆ ಅಭಿಷೇಕ,ಪುಷ್ಪಾಲಂಕಾರ, ಕುಕುಂಮಾರ್ಚನೆ, ಮಹಾಮಂಗಳಾರಿ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ, ಸಂಜೆ 7.30 ಗಂಟೆಗೆ ಶ್ರೀಹರಿವಾಸವಿಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ದೇವರಿಗೆ ಕಾರ್ತಿಕಪೂಜೆ ತದನಂತರ ಆಗಮಿಸಿದ ಭಕ್ತರಿಂದ ಕಾರ್ತಿಕ ದೀಪೋತ್ಸವ ದೀಪಗಳನ್ನು ಬೆಳಗಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಸಮಾಜದ ಭಕ್ತಾದಿಗಳು ಅವಧಾನಿ ಬಡಾವಣೆ ಭಕ್ತಾದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಕೃಪಾರ್ಶಿರ್ವಾದಕ್ಕಾಗಿ ಭಕ್ತಿ-ಸಮರ್ಪಿಸಿಕೊಂಡು ಅನ್ನ ಪ್ರಸಾದವನ್ನು ಸ್ವೀಕರಿಸಿದರು.
