
ಹಿರಿಯೂರು:
ಹಿರಿಯೂರು ನಗರದಲ್ಲಿ ಶ್ರೀಯುತ ಎಚ್.ಬಿ.ನರಸಿಂಹಮೂರ್ತಿ ಅವರು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಈಗ ಬೆಂಗಳೂರಿನ ಮಲ್ಲೇಶ್ವರಂ ಪದವಿ ಪೂರ್ವ ಶಿಕ್ಷಣ ಇಲಾಖೆ(ಅನುದಾನಿತ) ಉಪನಿರ್ದೇಶಕರಾಗಿ ಬಡ್ತಿ ಹೊಂದಿದ್ದರೂ ಸಹ ಅತ್ಯಂತ ಶ್ರಧ್ಧೆಯಿಂದ, ಪ್ರಾಮಾಣಿಕತೆ, ಆಸಕ್ತಿಯಿಂದ ವೃತ್ತಿಯನ್ನು ಮಾಡುತ್ತಿದ್ದಾರೆ, ಇವರು ಜೀವನದಲ್ಲಿ ಇನ್ನೂ ಉನ್ನತ ಹೆಸರು ಮಾಡಲಿ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿರಮೇಶ್ ಹೇಳಿದರು.
ನಗರದ ವೇದಾವತಿ ನಗರದಲ್ಲಿ ವಾಸವಾಗಿರುವ ಬೆಂಗಳೂರಿನ ಮಲ್ಲೇಶ್ವರಂ ಪದವಿ ಪೂರ್ವ ಶಿಕ್ಷಣ ಇಲಾಖೆ(ಅನುದಾನಿತ) ಉಪನಿರ್ದೇಶಕರಾಗಿ ಬಡ್ತಿಯನ್ನು ಹೊಂದಿದ ಶ್ರೀಯುತ ಎಚ್.ಬಿ.ನರಸಿಂಹಮೂರ್ತಿಯವರಿಗೆ ಗೌರವ ಸಮರ್ಪಣೆ ಮಾಡಿ ನಂತರ ಅವರು ಮಾತನಾಡಿದರು.
ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಸಮಾಜದಲ್ಲಿ ಎಲೆಮರೆಕಾಯಿಯಂತೆ ವೃತ್ತಿಯಲ್ಲಿ ಪ್ರಾವಿಣ್ಯತೆಯನ್ನು ತೋರುತ್ತಾ ಸದಾ ನಗುನಗುತ್ತಾ ಕೆಲಸ ಮಾಡುತ್ತಾ ಇರುವ, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ, ಅಜಾತಶತ್ರುವಾಗಿದ್ದಾರೆ. ಇಂಥವರು ಸಮಾಜದಲ್ಲಿ ಹುಡುಕಿದರೂ ಸಿಗುವುದಿಲ್ಲ .ಇವರಿಗೆ ಭಗವಂತನು ಆಯುರಾರೋಗ್ಯ, ಐಶ್ವರ್ಯ, ಯಶಸ್ಸು ಕೊಟ್ಟು ಕಾಪಾಡಲಿ ಎಂಬುದಾಗಿ ಅವರು ಶುಭಹಾರೈಸಿದರು.
ಪ್ರಾಂಶುಪಾಲರಾದ ವಸಂತ್ ಕುಮಾರ್ ಅವರು ಮಾತನಾಡಿ, ಶ್ರೀಯುತ ಎಚ್.ಬಿ.ನರಸಿಂಹಮೂರ್ತಿಯವರು ನಮಗೆ ಕಳೆದ 30 ವರ್ಷಗಳಿಂದ ಆತ್ಮೀಯರು. ವೃತ್ತಿಯಲ್ಲಿ, ಸ್ನೇಹದಲ್ಲಿ, ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ. ಇವರು ಬಡ್ತಿ ಹೊಂದಿರುವುದು ನಮಗೆಲ್ಲ ಸಂತಸ ತಂದಿದೆ ಎಂಬುದಾಗಿ ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರಿನ ಮಲ್ಲೇಶ್ವರಂ ಅನುದಾನಿತ ಪಿ.ಯು.ಕಾಲೇಜಿನ ಉಪನಿರ್ದೇಶಕರಾದ ನರಸಿಂಹಮೂರ್ತಿ ಮಾತನಾಡಿ, ಇಷ್ಟು ವರ್ಷ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ನನಗೆ ಇನ್ನೂ ಆರು ತಿಂಗಳು ಸೇವಾವಧಿ ಇದೆ. ನಂತರ ನಿವೃತ್ತಿ ಆಗುತ್ತೇನೆ ನನ್ನ ಸೇವಾವಧಿಯಲ್ಲಿ ಯಾರೇ ನನ್ನ ಬಳಿಗೆ ಬಂದರು ಸುಗಮವಾಗಿ ಅವರ ಕೆಲಸ ಮಾಡಿ ಕೊಡುತ್ತೇನೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀಯುತ ನರಸಿಂಹಮೂರ್ತಿ ಮತ್ತು ಅವರ ಪತ್ನಿಯವರಿಗೆ ನಾಗರೀಕ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೊ. ಮೈಸೂರ್ ಶಿವಣ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಜಿ.ಹನುಮಂತರಾಯ ಆಪ್ಟಿಕಲ್ಸ್ ರಾಜೇಶ್ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

