
ಹಿರಿಯೂರು:
ಕರುನಾಡಿನಲ್ಲಿ ಕನ್ನಡಿಗರಾದ ನಾವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ, ಬೆಳೆಸುವ ಜೊತೆಗೆ ಕನ್ನಡದ ಬಗ್ಗೆ ಪ್ರೀತಿ-ಅಭಿಮಾನವವನ್ನು ಬೆಳೆಸಿಕೊಳ್ಳಬೇಕು, ಕನ್ನಡ ರಾಜ್ಯೋತ್ಸವ ಕೇವಲ ನವಂಬರ್ ತಿಂಗಳ ಆಚರಣೆಯಾಗದೇ ವರ್ಷದ ಪ್ರತಿದಿನವೂ ಕನ್ನಡದ ದಿನವಾಗಬೇಕು ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಗೌರವ ಅಧ್ಯಕ್ಷರಾದ ಗೋ.ಬಸವರಾಜ್ ಹೇಳಿದರು.
ನಗರದ ಜಾಮಿಯಾ ಸರ್ಕಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಕನ್ನಡರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯರಾದ ಮೂರ್ತಣ್ಣ ಹಾಗೂ ಜಾಮಿಯಾ ಮಸೀದಿ ಗುರುಗಳಾದ ಸಿಬ್ಬತ್ ಉಲ್ಲಾ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಗೌರವ ಅಧ್ಯಕ್ಷರಾದ ಗೋ.ಬಸವರಾಜ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್.ದಾದಾಪೀರ್, ನಗರ ಅಧ್ಯಕ್ಷರಾದ ಮೊಹಮ್ಮದ್ ಜಾಕೀರ್, ಕಾರ್ಮಿಕರ ಘಟಕದ ಉಪಾಧ್ಯಕ್ಷರಾದ ನಜೀರ್, ನಗರ ಪ್ರಧಾನ ಕಾರ್ಯದರ್ಶಿ ಸುಹೇಲ್, ಜಾಮಿಯಾ ಸರ್ಕಲ್ ಘಟ್ಟದ ಅಧ್ಯಕ್ಷರಾದ ರಫಿ, ಗೌರವ ಅಧ್ಯಕ್ಷರಾದ ಜಬಿಉಲ್ಲಾ,ಉಪಾಧ್ಯಕ್ಷ ಆಸಿಫ್ ಮತ್ತು ಅಜ್ಮತುಲ್ಲಾ, ಪ್ರಧಾನ ಕಾರ್ಯದರ್ಶಿ ತೌಸಿಫ್ ಮತ್ತು ಶಹೀಬ್, ಅನ್ಸರ್ ,ನಯಾಜ್, ಮೊಹಮ್ಮದಿ ಡೀಲರ್ ಉಪಸ್ಥಿತರಿದ್ದರು.

