April 21, 2026
01

ಹಿರಿಯೂರು:

ನಗರದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ4ರಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪಾಯಕಾರಿ ಪರಿಸ್ಥಿತಿಯತ್ತ ಗಮನ ಸೆಳೆಯಲು ಅರ್ಜುನ್ ಬ್ಯಾಡರಹಳ್ಳಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು ಹಾಗೂ ಪುಣೆ ಕಡೆಯಿಂದ ಹಿರಿಯೂರಿಗೆ ಬರುವ ಎರಡು ಮಾರ್ಗಗಳು ಈ ಸಾರ್ವಜನಿಕರಿಗೆ ಗಂಭೀರ ಅಪಾಯಕಾರಿವಾಗಿವೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಬಳ್ಳಾರಿ, ಶ್ರೀರಂಗಪಟ್ಟಣರಸ್ತೆ ಜಂಕ್ಷನ್ ಅಪಘಾತಗಳಿಗೆ  ಹಾಟ್ ಸ್ಪಾಟ್  ಆಗಿವೆ. ರಸ್ತೆ ಬದಿಯಲ್ಲಿ ಅಂಗಡಿಗಳು ಊಟದ ಬೂತ್ ಗಳು ಹೆಚ್ಚಾಗುತ್ತಿವೆ. ಭಾರವಾದ ಟ್ರಕ್ ಮತ್ತು ಲಾರಿಗಳ ನಿಲುಗಡೆಯು ಪಾದಚಾರಿಗಳಿಗೆ  ಹೆಚ್ಚಿನ ಅಪಾಯ ತರುತ್ತಿವೆ. ಇವುಗಳ ಪರಿಣಾಮವಾಗಿ  ಅಪಘಾತ ಸಂಭವಿಸುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪುಣೆ ಕಡೆಯಿಂದ  ಬರುವ ಪ್ರವೇಶ ಮಾರ್ಗವೂ ಅಪಾಯಕಾಣೆಯಾಗಿದೆ.ಪುಣೆಯ ಕಡೆಯಿಂದ ಹಿರಿಯೂರಿಗೆ ಬರುವ ಪ್ರವೇಶ ಸ್ಥಳದ ರಸ್ತೆ ವಿನ್ಯಾಸ ಮತ್ತು ತಿರುವು ಸರಿಯಿಲ್ಲದ ಕಾರಣ ಚಾಲಕರಿಗೆ ದೃಶ್ಯ ಮಾನತೆ  ಕಡಿಮೆಯಾಗುತ್ತದೆ. ದೊಡ್ಡ ವಾಹನಗಳ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಎಚ್ಚರಿಕೆ ಫಲಕಗಳು ಕಾಣಿಸುತ್ತಿಲ್ಲ. ರಾತ್ರಿ ವೇಳೆ ತೀವ್ರ ಅಪಾಯ ತರುತ್ತಿವೆ.

ಹಿರಿಯೂರು ರಾಷ್ಟ್ರೀಯ ಹೆದ್ದಾರಿ 4ರ ಪ್ರವೇಶ ಸ್ಥಳಗಳು ಅಪಘಾತ ವಲಯಗಳಾಗಿವೆ. ಪ್ರತಿದಿನ ಜನರು ಅಪಾಯದ ಅಂಚಿನಲ್ಲಿ ಸಂಚರಿಸುತ್ತಿದ್ದಾರೆ. ಸಾರ್ವಜನಿಕರ ಹಿತಾಸಕ್ತಿಗಾಗಿ ತಕ್ಷಣ ಸುಧಾರಣೆ ಅತ್ಯಗತ್ಯ ಎಂಬುದಾಗಿ ತಮ್ಮ ಮನವಿಯನ್ನು ಕೇಂದ್ರ ಸಚಿವರ ಅಧಿಕೃತ ಇ-ಮೇಲ್ ಮುಖಾಂತರ  ಸಲ್ಲಿಸಿರುತ್ತಾರೆ. ಶೀಘ್ರ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ ಎಂಬುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *