March 6, 2026
000002

ಹಿರಿಯೂರು :

ನಗರದ ಚಿಕ್ಕಪೇಟೆಯ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀಭದ್ರಕಾಳೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅಕ್ಟೋಬರ್ 21ರ ಮಂಗಳವಾರದಿಂದ ನವಂಬರ್ 25 ಮಂಗಳವಾರದವರೆಗೆ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಅರ್ಚಕರಾದ ಹೆಚ್.ವಿ.ನಾಗರಾಜ್ ಆಚಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೇ ನವಂಬರ್ 25 ರ ಮಂಗಳವಾರದಂದು ಕಡೇ ಕಾರ್ತಿಕೋತ್ಸವದ ಪ್ರಯುಕ್ತ ಶ್ರೀವೀರಭದ್ರೇಶ್ವರಸ್ವಾಮಿ ಹಾಗೂ  ಶ್ರೀಭದ್ರಕಾಳೇಶ್ವರಿ ವಿಶೇಷ ಅಭಿಷೇಕ, ಅರ್ಚನೆ, ಪೂಜೆ ಹಾಗೂ ಸಾಯಂಕಾಲಪೂಜೆ, ದೀಪೋತ್ಸವ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ  

ಅಲ್ಲದೆ ನವಂಬರ್ 25ನೇ ಮಂಗಳವಾರ ಕಡೇ ಕಾರ್ತಿಕೋತ್ಸವದ ಪ್ರಯುಕ್ತ ಕಲ್ಲಿನ ಕಂಬದ ದೀಪೋತ್ಸವ ನಂತರ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ. ಆದ್ದರಿಂದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಾಗಿರುವ ಭಕ್ತಾದಿಗಳು 9731643619, 9686499646, 7899246460 ಈ ನಂಬರ್ ಗೆ ಕರೆ ಮಾಡುವ ಮೂಲಕ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *