
ಹಿರಿಯೂರು:
ಜವಹರ್ ಲಾಲ್ ನೆಹರೂ ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಶ್ರಮಿಸಿ ದೇಶವನ್ನು ಅಭಿವೃದ‍್ದಿಗೊಳಿಸಿ ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರಬುನಾದಿ ಹಾಕಿದ ಮಹಾನ್ ಚೇತನ ಎಂಬುದಾಗಿ ಗ್ಯಾರಂಟಿ ಯೋಜನೆಗಳಅನುಷ್ಟಾನ ಸಮಿತಿ ಉಪಾಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್ ಅವರು ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರೂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೆಹರು ಅವರು ದೂರದೃಷ್ಟಿಯುಳ್ಳ ನಾಯಕ.ಕಾಂಗ್ರೆಸ್ ಕಾರ್ಯಕರ್ತರು ನೆಹರು ಕಾರ್ಯಕ್ರಮಗಳನ್ನು ಮುಂದಿಟ್ಟು ಬಿ.ಜೆ.ಪಿ.ಗೆ ತಕ್ಕ ಉತ್ತರ ನೀಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆಯ ಪ್ರಮಾಣ ಶೇ. 14 ರಷ್ಟಿತ್ತು. ಈ ಪ್ರಮಾಣ ಹೆಚ್ಚಿಸಲು ಅನೇಕ ಶಾಲಾ–ಕಾಲೇಜು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರ ಅಭಿವೃದ‍್ಧಿಗೆ ಸ್ಮರಿಸಬೇಕು.
ಆದರೆ, ಈ ಬಗ್ಗೆ ಅರಿವಿಲ್ಲದ ಬಿ.ಜೆ.ಪಿ. ಮುಖಂಡರು ಅವರನ್ನು ಅತ್ಯಂತ ಕಟುವಾಗಿ ಟೀಕಿಸುತ್ತಿದ್ದಾರೆ ಎಂಬುದಾಗಿ ಅವರು ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಆರ್.ಬಾಲಕೃಷ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಡಾ.ಸುಜಾತ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿತಿಪ್ಪಮ್ಮ, ಮಾಜಿ ನಗರಸಭೆಸದಸ್ಯರಾದ ಬಿ.ಎನ್.ಪ್ರಕಾಶ್, ಮಂಜುಳಾ, ಅಂಬಿಕಾಆರಾಧ್ಯ, ವಿ.ಶಿವಣ್ಣ, ತಿಪ್ಪೇಸ್ವಾಮಿ, ಗಿಡ್ಡೋಬನಹಳ್ಳಿ ಅಶೋಕ್, ಕಾರ್ಮಿಕ ಘಟಕದ ಅಧ್ಯಕ್ಷರಾದ ವಿ.ಶಿವಕುಮಾರ್, ಎಸ್.ಎಲ್.ಶಿವಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕಬ್ಬಡಿರವಿ, ನೌಶದ್, ಜ್ಞಾನೇಶ್ ಕುಮಾರ್, ಕಣುಮಣ್ಣ, ಶಿವಮೂರ್ತಿ, ಡಿ.ಕೆ.ರಘು, ಮೆಹರ್ ತಾಜ್, ತಿಪ್ಪೇಸ್ವಾಮಿ, ರಾಜಪ್ಪ ಘಾಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

