
ಹಿರಿಯೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ರದುರ್ಗ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಅಧ್ಯಕ್ಷರು, ಮಣ್ಣಿನ ಮಗ, ಪೊಲೀಸ್ ಬೇಟೆ ಪತ್ರಿಕೆಗಳ ಸಂಪಾದಕರಾದ ಹೆಚ್.ಟಿ. ಪ್ರಸನ್ನಕುಮಾರ್ ಹುಚ್ಚವ್ವನಹಳ್ಳಿರವರಿಗೆ ಹಿರಿಯೂರು “ಬೆಸ್ಟ್ ಫ್ರೆಂಡ್ಸ್” ಬಳಗದವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ, ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ.ಸಾ.ಪ.ಅಧ್ಯಕ್ಷ ರಾಮಚಂದ್ರಪ್ಪ, ಗೌರವ ಕಾರ್ಯದರ್ಶಿ ಅಸ್ಗರ್ ಅಹಮದ್, ಹಿರಿಯ ಶಿಕ್ಷಕರಾದ ಬಿ.ಜಿ.ಪದ್ಮನಾಭ್, ನಂದಾವರಿಕ್, ಪ್ರೇಮ್ ಕುಮಾರ್, ಅಶ್ವಕ್ ಅಹಮದ್, ಅಂಟೋನಿ, ಗ್ಯಾಸ್ ವಿಜಯ್, ಉಮಾಶಂಕರ್, ಎಲ್.ಐ.ಸಿ.ವೆಂಕಟೇಶ್, ರಾಜಣ್ಣ, ಗಜಾನನ ತಿಪ್ಪೇಸ್ವಾಮಿ, ಮಹೇಶ್, ಮಹದೇವ್, ಬಶೀರ್, ಶಿವಣ್ಣ, ಕೆ.ಕೆ.ಎಸ್.ಮಂಜಣ್ಣ, ನಾಗರಾಜ್, ಶ್ರೀನಿವಾಸ್ ಶೆಟ್ಟಿ, ದಯಾನಂದ್, ಕುಮರೇಶ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

