
ಹಿರಿಯೂರು :
ಹುಚ್ಚವನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿರುವವರ ವಿರುದ್ಧ ಈ ಕೂಡಲೇ ಕಠಿಣಕ್ರಮವನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಹುಚ್ಚವನಹಳ್ಳಿ ಗ್ರಾಮಸ್ಥರ ಪರವಾಗಿ ದಲಿತ ಸ್ವಾಭಿಮಾನಿ ಸಮಿತಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕಣುಮೇಶ್ ಒತ್ತಾಯಿಸಿದರು.
ದಲಿತ ಸ್ವಾಭಿಮಾನಿ ಸಮಿತಿ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಎಚ್.ನಾರಾಯಣಸ್ವಾಮಿಯವರ ಆದೇಶದ ಮೇರೆಗೆ ಹುಚ್ಚವನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ, ಮಾನ್ಯ ಅಬಕಾರಿ ಅಧಿಕ್ಷಕರು ಆದ ಅಮಿತ್ ರವರಿಗೆ ಮನವಿ ಪತ್ರ ಸಲ್ಲಿಸಿ, ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ದಲಿತ ಸ್ವಾಭಿಮಾನಿ ಸಮಿತಿ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕಣುಮೇಶ್, ತಾಲೂಕು ಅಧ್ಯಕ್ಷ ಮಂಜುನಾಥ್ ಹುಚ್ಚವ್ವನಹಳ್ಳಿ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಪಿಟ್ಳಾಲಿ, ಚಂದ್ರಶೇಖರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಈರಣ್ಣ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರವಿಶಂಕರ್, ಹೆಚ್.ಎನ್. ರಂಗಸ್ವಾಮಿ, ಅವಿನಾಶ್, ಮೋಹನ್ ಸ್ಪಾಟ್ ನಾಗಣ್ಣ, ರುದ್ರಪ್ಪ, ಜೈರಾಮಪ್ಪ, ಲಕ್ಷ್ಮಕ್ಕ, ಕರಿಯಮ್ಮ, ಜಯಮ್ಮ, ಪುಷ್ಪಕ, ಶಾಂತಮ್ಮ, ಗೀತಮ್ಮ, ಮಾರಕ್ಕ, ರಂಗಮ್ಮ, ರತ್ನಮ್ಮ, ರುದ್ರಮ್ಮ, ಭಾರತಮ್ಮ, ಆಶಮ್ಮ, ಹಾಗೂ ದಲಿತ ಸ್ವಾಭಿಮಾನಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸುನಿಲ, ಪ್ರವೀಣಕುಮಾರ್, ಯೋಗೇಶ್, ಶ್ರೀಧರ್, ಅಜಿತ್, ಹಾಗೂ ಹುಚ್ಚವನಹಳ್ಳಿ ಗ್ರಾಮದ ಸರ್ವ ಮುಖಂಡರುಗಳು ಹಾಜರಿದ್ದರು.

