March 2, 2026
02

ಹಿರಿಯೂರು:

ಇಂದು  ಕೆಲವು ರಾಜಕೀಯ ಯುವಮುಖಂಡರು  ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಸರಿಯೇ, ಅಭಿವೃದ್ಧಿ ಕೆಲಸಗಳನ್ನು ಕೇಳುವುದು ತಪ್ಪಲ್ಲ ಆದರೆ ಈ ರೀತಿ ಏಕವಚನದಲ್ಲಿ ಅವಹೇಳನ ಮಾಡಿರುವುದನ್ನು ನಾನು ಖಂಡಿಸುತ್ತೇನೆ ಎಂಬುದಾಗಿ ಅಪ್ಪಾಜಿಗೌಡ ಅವರು ಮಾಧ್ಯಮಗಳ ಮೂಲಕ ಪ್ರಶ್ನೆ ಮಾಡಿದ್ದಾರೆ.

ಕಳೆದ 12 ವರ್ಷಗಳ ಹಿಂದೆ  ನಮ್ಮ ಸಚಿವರು ಶಾಸಕರಾಗಿದ್ದಾಗ ಶನೇಶ್ವರ ದೇವಸ್ಥಾನವನ್ನು ಬೇರೆ ಕಡೆಗೆ ಶಿಫ್ಟ್ ಮಾಡಲು ಮಾನ್ಯ ಸಚಿವರೇ  ಆ ಜಾಗದ ಮಾಲೀಕರಿಗೆ ತಾವೇ ತಮ್ಮ ಸ್ವಂತ ಹಣ ನೀಡಿ ಬೇರೆ ಕಡೆ ಅವರಿಗೆ ನಿವೇಶನಗಳನ್ನು ಕೊಡಿಸಿದರು ಎಂದರಲ್ಲದೆ, ಕೆಲವು ನಮ್ಮ ಊರಿನ ಮುಖಂಡರುಗಳು, ದೇವಸ್ಥಾನವನ್ನು ಬೇರೆ ಕಡೆಗೆ ಶಿಫ್ಟ್ ಮಾಡಲು ಒಲವು ತೋರಲಿಲ್ಲ ಶನೇಶ್ವರ ದೇವಸ್ಥಾನದ ಬಗ್ಗೆ ಈ ರೀತಿ ಸಚಿವರ ಮೇಲೆ ಆರೋಪಿಸುವುದು ಸರಿಯಲ್ಲ.

ಇನ್ನು ಶೌಚಾಲಯದ ಬಗ್ಗೆ ತಮಗೆ ತಿಳಿದ ಹಾಗೆ ಮಾನ್ಯ ಸಚಿವರು ಧರ್ಮಪುರ ಬಸ್ ಸ್ಟ್ಯಾಂಡಿನಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದ್ದಾರೆ ಧರ್ಮಪುರ ಹಾಗೂ ಹೋಬಳಿಯ ಕೆಲವು ಕೆರೆಗಳಿಗೆ ನೀರು ತುಂಬಿಸಲು ಹೆಚ್ಚಿನ ಶ್ರಮವಹಿಸಿ ಈಗಾಗಲೇ ನೀರಾವರಿ ಅಧಿಕಾರಿಗಳು ಹಾಗೂ ರೈತ ಮುಖಂಡರೊಡನೆ ಸಭೆ ನಡೆಸಿ ಕೆರೆಗಳನ್ನು ತುಂಬಿಸಲು ನೀರನ್ನು ಬಿಡುಗಡೆ ಮಾಡಿಸಿದ್ದಾರೆ.

ಧರ್ಮಪುರ ಪ್ರೌಢಶಾಲೆ ಹಾಗೂ ಪಿ.ಯು.ಕಾಲೇಜುಗಳು ಸರ್ಕಾರಿ ಅನುದಾನಿತ  ವಿದ್ಯಾಸಂಸ್ಥೆಗಳಾಗಿದ್ದು, ಇವುಗಳ ನಿರ್ವಹಣೆ ಸರ್ಕಾರಿ ಶಾಲೆಗಳ ರೀತಿಯಲ್ಲಿಯೇ ಸರ್ಕಾರವು ಪ್ರತಿಯೊಂದು ಅನುಕೂಲವನ್ನು ಮಾಡುತ್ತ ಬಂದಿದೆ. ಅಲ್ಲದೆ, ಧರ್ಮಪುರವನ್ನು ಮಾದರಿ ಹೋಬಳಿ ಕೇಂದ್ರವನ್ನಾಗಿ ಮಾಡಲು ಧರ್ಮಪುರದಲ್ಲಿ ದ್ವಿಪಥ ರಸ್ತೆಯನ್ನು ವಿಭಜಕ ಅಳವಡಿಸಿ ಹೈಮಾಸ್ಕ್ ದೀಪಗಳನ್ನು ಅಳವಡಿಸಿದ್ದಾರೆ.

ಧರ್ಮಪುರದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಲು ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿಸಿ ಟೆಂಡರ್ ಕರೆಯಲು ಮಾನ್ಯ ಸಾರಿಗೆ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.ನಮ್ಮ ಸಚಿವರಾದ ಡಿ.ಸುಧಾಕರ್ ಅವರು ಯಾರನ್ನು ಇದುವರೆಗೆ ಕಡೆಗಣಿಸಿಲ್ಲ, ಬಡವರಿಗೆ, ವಿದ್ಯಾರ್ಥಿಗಳಿಗೆ , ನಿಸ್ಸಹಾಯಕರಿಗೆ ಆಶಾ ಕಿರಣವಾಗಿದ್ದಾರೆ ಇಂತಹ ಸಚಿವರನ್ನು ಹೀಗೆಲ್ಲ ಅವಮಾನಿಸಿ, ಮಾತನಾಡುವುದು ಸರಿಯಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *