April 21, 2026
04

ಹಿರಿಯೂರು:

ತಾಯಿ ಮತ್ತು ಮಕ್ಕಳ ಆರೋಗ್ಯದ ಸುರಕ್ಷತೆ ಕಾಪಾಡಬೇಕಾದರೆ, ತಾಯಿ ಮತ್ತು ಶಿಶು ಮರಣದ ಪ್ರಮಾಣ ಕಡಿಮೆ ಮಾಡಬೇಕಾದರೆ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ, ಪೌಷ್ಟಿಕ ಆಹಾರ ಸೇವನೆ ಸೇವನೆಯಿಂದ ಮಾತ್ರ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬಹುದು ಎಂಬುದಾಗಿ  ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾII ನಾಗೇಶ್ ಹೇಳಿದರು,

ತಾಲ್ಲೂಕಿನ ಯಲ್ಲದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಐ.ಸಿ.ಎಂ.ಆರ್. ಮತ್ತು ಕೆ.ಎಚ್. ಪಿ. ಟಿ. ಸೆಂಟ್ ಜಾನ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತಾಯಿ ಮತ್ತು ಮಕ್ಕಳ ಆರೋಗ್ಯದ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿಗೆ ದೀಪವನ್ನು ಬೆಳಗಿಸುವ ಮೂಲಕ ಚಾಲನೆಯನ್ನು  ನೀಡಿ, ನಂತರ ಅವರು ಮಾತನಾಡಿದರು.

ಆರೋಗ್ಯವಂತ ತಾಯಿ ಮತ್ತು ಮಗು ಈ ದೇಶದ ಸಂಪತ್ತು, ಆದ್ದರಿಂದ ಗರ್ಭಿಣಿ ತಾಯಿ ಮತ್ತು ಜನಿಸುವ ಮಗುವಿನ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ  ಐ.ಸಿ.ಎಂ.ಆರ್. ತಂಡದ ಸದಸ್ಯರು ,ಮುಂಗಡ ಗರ್ಭಿಣಿಯರ ನೊಂದಣಿ, ಗಂಡಾತರ ಗರ್ಭಿಣಿಯರು, ಹೆರಿಗೆಯ ಪೂರ್ವ ಸಿದ್ಧತೆ, ತಡವಾಗಿ ಗರ್ಭಿಣಿಯರನೊಂದಣಿ, ಕಾಂಗರೂಮದರ್ ಕೇರ್, ಸ್ತನ್ಯಪಾನ, ಹಾಗೂ ವೈಯುಕ್ತಿಕ ಸ್ವಚ್ಛತೆಯ ಕುರಿತು ತರಬೇತಿಯನ್ನು ನೀಡಲಾಯಿತು.

ಈ ತರಬೇತಿಯಲ್ಲಿ ಯಲ್ಲದಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ, ಜ್ಞಾನ ಸೂರ್ಯ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಮನೋಹರ್  ಐ.ಸಿ.ಎಂ.ಆರ್. ತಂಡದ ಜಿಲ್ಲಾ ಸಂಯೋಜಕರಾದ  ವೀಣಾ, ಉಮೇಶ್, ಎನ್.ಕವನ, ಅಬ್ಬಾಸ್, ವೆಂಕಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿ  ಶ್ರೀಧರ್,  ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರುಹಾಗೂ ಸಿಬ್ಬಂದಿಗಳು, ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *