
ಹಿರಿಯೂರು :
ದೇಶದಲ್ಲಿ ಹರಿದುಹಂಚಿ ಹೋಗಿದ್ದ ಕರುನಾಡಿನ ಕನ್ನಡಿಗರನ್ನು ಒಂದುಗೂಡಿಸಲು ಲಕ್ಷಾಂತರ ಮಹನೀಯರು ಹೋರಾಟ ನಡೆಸಿದ್ದು, ಇಂದು ಕನ್ನಡಿಗರಾದ ನಾವೆಲ್ಲರೂ ಒಗ್ಗೂಡಿರುವುದಕ್ಕೆ ಅವರ ಹೋರಾಟ, ತ್ಯಾಗ, ಬಲಿದಾನವೇ ಕಾರಣ, ಹೀಗೆ ಕನ್ನಡನಾಡಿನಲ್ಲಿ ಹೋರಾಟದಿಂದ ಪಡೆದ ಕನ್ನಡನಾಡು-ನುಡಿಯನ್ನು ಪ್ರೀತಿಸಿ, ಉಳಿಸಿ ಬೆಳೆಸುವ ಮೂಲಕ ಕನ್ನಡದ ಕಂಪನ್ನು ವಿಶ್ವದೆಲ್ಲಡೆ ಹರಡಬೇಕು ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿರುವ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು.

ಈ ಕನ್ನಡನಾಡಿನ ನೆಲ-ಜಲ, ಭಾಷೆ, ಸಾಹಿತ್ಯವನ್ನು ಕಾಪಾಡಲು ಕನ್ನಡಿಗರೆಲ್ಲರೂ ಪ್ರತಿದಿನವೂ ಕನ್ನಡ ರಾಜ್ಯೋತ್ಸವವನ್ನು ನಿತ್ಯೋತ್ಸವದಂತೆ ಆಚರಿಸುವ ಮೂಲಕ ಈ ಕನ್ನಡನಾಡಿನಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಅತ್ಯಂತ ಶ್ರೀಮಂತ ಭಾಷೆಯಾದ ಕನ್ನಡ ಭಾಷೆ, ಹಾಗೂ ಕನ್ನಡಸಾಹಿತ್ಯವನ್ನು ಉಳಿಸಿ, ಬೆಳೆಸಲು, ಕನ್ನಡಿಗರಾದ ನಾವೆಲ್ಲರೂ ಕಂಕಣಕಟ್ಟಿ ನಿಲ್ಲಬೇಕು ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಶಿಕ್ಷಕ ಉಮೇಶ್ ಯಾದವ್, ಶಿವರಾಜ್ ನಾಯಕ್, ಕೋ-ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನ, ಶಿಕ್ಷಕಿಯರುಗಳಾದ ರಜಿಯಾ, ಗಂಗಮ್ಮ, ರಂಜಿತಾ, ಸಬೀಹಾ, ಮುಬೀನಾ, ಹೇಮಲತಾ, ದ್ರಾಕ್ಷಾಯಣಿ, ಸಾಧಿಕಾ, ಮಮತಾ, ಭಾಗ್ಯ, ಪೂಜಾ, ಕಾವ್ಯ, ಜಯಸುಧಾ, ಅಕ್ಷಿತಾ, ಸುಲೋಚನಾ, ಸೇರಿದಂತೆ ವಿದ್ಯಾಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳು ಉಪಸ್ಥಿತರಿದ್ದರು.

