
ಹಿರಿಯೂರು:
ಅಪ್ಪುರವರು ಕಲಾವಿದರಾಗಿ ಚಿತ್ರರಂಗದಲ್ಲಿ ಎಲ್ಲರನ್ನು ಪ್ರೀತಿಸುವ ಗುಣ ಹೊಂದಿ, ಸಮಾಜಮುಖಿ ಸೇವೆಗಳನ್ನ ಮಾಡುತ್ತಿದ್ದರು ಅವರು ನಮ್ಮಿಂದ ಅಗಲಿದಾಗ ಅವರ ಸೇವೆಗಳು ನಮಗೆ ಗೊತ್ತಾಯಿತು ಎಂಬುದಾಗಿ ಕಲಾವಿದ ಹೆಚ್.ಎಸ್.ಮಾರುತೇಶ ಅವರು ಹೇಳಿದರು.
ತಾಲ್ಲೂಕಿನ ಶ್ರೀಶೈಲ ವೃತ್ತದಲ್ಲಿ ಡಾ.ಪುನೀತ್ ರಾಜ್ ಕುಮಾರ್ ರವರ 4ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ತಾಲ್ಲೂಕು ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೇರು ನಟ ರಾಜಕುಮಾರ್ ಅವರ ಕೊನೆಯ ಮಗನಾಗಿ ಜನಿಸಿ, ವಿಶ್ವದಲ್ಲೇ ಅಭಿಮಾನಿಗಳನ್ನು ಸಂಪಾದನೆ ಮಾಡಿರುವಂತಹ ನಟ ಡಾ. ಪುನೀತ್ ರಾಜಕುಮಾರ್ ಅವರು ನಮ್ಮಿಂದ ದೈಹಿಕವಾಗಿ ಆಗಲಿದ್ದರೂ ಮಾನಸಿಕವಾಗಿ ಎಲ್ಲರ ಹೃದಯದಲ್ಲಿ ನಗುವಿನ ಒಡೆಯರಾಗಿದ್ದಾರೆ. ಎಂದರಲ್ಲದೆ,
ಜನ ಮಾನಸದಲ್ಲಿ ಮರೆಯಲಾರದ ಮಾಣಿಕ್ಯ ಎಂದೇ ಪ್ರಸಿದ್ಧರಾಗಿರುವ ಪುನೀತ್ ರಾಜ್ ಕುಮಾರ್ ರವರ 4ನೇ ವರ್ಷದ ಪುಣ್ಯಸ್ಮರಣೆಯಲ್ಲಿ ನನ್ನ ಎರಡು ಕಣ್ಣುಗಳ ದಾನ ಮಾಡುವದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಹಿತರಕ್ಷಣಾ ಸೇನೆ ಜಿಲ್ಲಾ ಅಧ್ಯಕ್ಷರಾದ ಎನ್. ಬಸವರಾಜ್, ವಿಷ್ಣು ಸೇನೆ ಸಮಿತಿ ಅಧ್ಯಕ್ಷರಾದ ಎನ್.ಕರ್ಣಕುಮಾರ್ , ಹಿರಿಯ ಮುಖಂಡರುಗಳಾದ ಕೇಶವಮೂರ್ತಿ, ಪದ್ಮನಾಭ, ಜಬಿವುಲ್ಲಾ, ರಹಿಮ್, ಮಾಸ್ಟರ್ ಶಿವಣ್ಣ, ಅಶೋಕ್ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
