
ಹಿರಿಯೂರು:
ಭದ್ರಾ ಮೇಲ್ದಂಡೆ ಯೋಜನೆ, ವಾಣಿವಿಲಾಸ ಸಾಗರದ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸಮಗ್ರ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಕೋಡಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ವೀಕ್ಷಿಸಿ, ಕೋಡಿಗೆ ಸಚಿವರು ಗಂಗಾಪೂಜೆ ನೆರವೇರಿಸಿ, ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಹಿರಿಯೂರಿಗೆ ಸಿಂಹಪಾಲು ನೀರು ಸಿಗಲಿದೆ. ರಾಜ್ಯ ಸರ್ಕಾರ ಬಯಲು ಸೀಮೆ ನೀರಾವರಿ ಯೋಜನೆಗೆ ವಿಶೇಷ ಆದ್ಯತೆ ನೀಡಿದೆ. ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿರುವ ಕೆರೆ-ಕಟ್ಟೆ, ಜಲಮೂಲಗಳ ಅಭಿವೃದ್ಧಿಪಡಿಸಿ ನೀರು ತುಂಬಿಸಲು ವಿಶೇಷ ಅನುದಾನ ನೀಡಲಾಗುವುದು ಎಂದರಲ್ಲದೆ,
ವಾಣಿವಿಲಾಸ ಸಾಗರ ಜಲಾಶಯ ವರ್ಷದಲ್ಲಿ 2 ನೇ ಬಾರಿ ಭರ್ತಿಯಾಗಿ ಕೋಡಿ ಬಿದ್ಧಿರುವುದು ಅವಿಸ್ಮರಣೀಯ .ಇದರಿಂದ ನಾಲ್ಕೈದು ವರ್ಷ ಕುಡಿಯುವ ನೀರು ಕೃಷಿಗೆ ಅನುಕೂಲವಾಗಲಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಅಹ್ವಾನಿಸಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿಣ ಅರ್ಪಿಸಲಾಗುವುದು ಎಂಬುದಾಗಿ ಅವರು ಹೇಳಿದರು.
ವಾಣಿವಿಲಾಸ ಜಲಾಶಯದ ಬಳಿ ಮೂಲ ಸೌಕರ್ಯಾಭಿವೃದ್ಧಿ, ವಾಹನ ಪಾರ್ಕಿಂಗ್, ಮೂಲ ಸೌಕರ್ಯಾಭಿವೃದ್ಧಿ, ವಾಹನ ಪಾರ್ಕಿಂಗ್, ಉದ್ಯಾನವನ ಪುನಶ್ಚೇತನ, ಪ್ರವಾಸಿ ಮಂದಿರ ಲೋಕಾರ್ಪಣೆ, ಹಿನ್ನೀರು ಪ್ರದೇಶದಲ್ಲಿ ಸಾಹಸ ಕ್ರೀಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಅವರು ಹೇಳಿದರು.
ವೇದಾವತಿನದಿ ಪಾತ್ರದಲ್ಲಿ ಮಳೆಯಾಗಿ ಜಲಾಶಯದ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಕೋಡಿ ಮೂಲಕ ಅಪಾರ ಪ್ರಮಾಣದ ನೀರು ವೇದಾವತಿ ನದಿಗೆ ಹರಿಯಲಿದೆ. ನದಿ ಪಾತ್ರದ ಜನರ ಸುರಕ್ಷತೆಗೆ ತುರ್ತು ಕ್ರಮಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ.ರಮೇಶ್, ಕೆ.ಪಿ.ಸಿ.ಸಿ. ಸದಸ್ಯ ಅಮೃತೇಶ್ವರಸ್ವಾಮಿ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ್, ಮುಖಂಡರಾದ ಜ್ಞಾನೇಶ್, ಶಿವಕುಮಾರ್, ಕಲ್ಲಹಟ್ಟಿಹರೀಶ್, ರವಿ, ರಂಗಸ್ವಾಮಿ, ಲೋಕೇಶ್, ಮಹೇಶ್, ಗುರುಪ್ರಸಾದ್, ದರ್ಶನ್, ಮಧು, ಕಿಟ್ಟಿ, ವಿಕಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

