
ಹಿರಿಯೂರು:
ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಗೆ ನಗರಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ದಿನಾಂಕ 29ರಂದು ನಡೆಯುವ ಚುನಾವಣೆಗೆ ನಗರದ ನಗರಸಭೆಯಿಂದ ಎನ್.ಚಿತ್ರಜಿತ್ ಯಾದವ್ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಅಂಬಿಕಾಆರಾಧ್ಯರವರು ಅಭ್ಯರ್ಥಿಯಾಗಿ ಹಿರಿಯೂರು ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪ ಹಾಗೂ ವೈ.ಪಿ. ಡಿ. ದಾದಪೀರ್ ರವರು ಈ ಇಬ್ಬರು ಅಭ್ಯರ್ಥಿಗಳಿಗೆ ಸೂಚಕರಾಗಿ ಭಾಗವಹಿಸಿದ್ದರು.

