
ಹಿರಿಯೂರು:
ನಗರದಲ್ಲಿ ಹೊಸದಾಗಿ ಲಿಂಕ್ ಲೈನ್ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ಪ್ರಯುಕ್ತ ಅಕ್ಟೋಬರ್ 15ರಂದು ಹಿರಿಯೂರು 66/11 ವಿದ್ಯುತ್ ವಿತರಣಾ ಕೇಂದ್ರದ ಎಫ್-9 ಹುಳಿಯಾರು ಮತ್ತು ಎಫ್-2 ತೋಟಗಾರಿಕೆ ಫೀಡರ್ ಮತ್ತು ಎಫ್-11ಚಳ್ಳಕೆರೆ ವಾಂಟರ್ ಸಪ್ಲೈ11 ಕೆವಿಫೀಡರ್ ಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪೀರ್ ಸಾಬ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಹಿರಿಯೂರುನಗರದ ಟಿ.ಬಿ.ವೃತ್ತ, ವೇದಾವತಿನಗರ, ಅವಧಾನಿನಗರ, ಲಕ್ಕವ್ವನಹಳ್ಳಿರಸ್ತೆ, ಕೆ.ಎಂ.ಕೊಟ್ಟಿಗೆ, ಹರಿಶ್ಚಂದ್ರಘಾಟ್, ಎ.ಪಿ.ಎಂ.ಸಿ. ಹಿಂಭಾಗ ಚಿತ್ರದುರ್ಗ ಕುಡಿಯುವ ನೀರಿನ ಘಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಈ ಪ್ರದೇಶದ ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

